Publish Date: Tue, 22 Feb 2022 (13:13 IST)
Updated Date: Tue, 22 Feb 2022 (13:14 IST)
ಡೆಹ್ರಾಡೂನ್ : ಮದುವೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವಾಹನ ಕಂದಕಕ್ಕೆ ಬಿದ್ದು 14 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಜನರು ಪ್ರಯಾಣಿಸುತ್ತಿದ್ದ ವಾಹನವು ಸುಖಿಧಾಂಗ್ ರೀತಾ ಸಾಹಿಬ್ ರಸ್ತೆಯ ಬಳಿಯ ಕಂದಕ್ಕೆ ಬಿದ್ದಿದೆ ಎಂದು ಕುಮಾನ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ನೀಲೇಶ್ ಆನಂದ್ ಭರ್ನೆ ಅವರು ತಿಳಿಸಿದ್ದಾರೆ.
ಜನರು ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದರು. ಈ ವೇಳೆ ವಾಹನ ಕಂದಕಕ್ಕೆ ಬಿದ್ದಿದೆ. ಪರಿಣಾಮವಾಗಿ ವಾಹನದಲ್ಲಿದ್ದವರ ಪೈಕಿ 11 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗಳಾದವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ.