ಹೈದರಾಬಾದ್: ತೆರೆ ಮೇಲಿನ ಸೂಪರ್ ಹಿಟ್ ಜೋಡಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ? ಇಂತಹದ್ದೊಂದು ಸುದ್ದಿ ಹರಿದಾಡಿದೆ.
ಈ ವರ್ಷ ಹೊಸ ವರ್ಷಾಚರಣೆಯನ್ನು ರಶ್ಮಿಕಾ-ವಿಜಯ್ ಗೋವಾದಲ್ಲಿ ಒಟ್ಟಿಗೆ ಕಳೆದಿದ್ದರು ಎನ್ನಲಾಗಿತ್ತು. ಇದರ ನಡುವೆ ಇಬ್ಬರೂ ಮುಂಬೈನಲ್ಲಿ ಆಗಾಗ ಡಿನ್ನರ್ ಡೇಟ್ ಗೆ ಜೊತೆಯಾಗಿ ಹೋಗುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿತ್ತು. ಹೀಗಾಗಿ ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎನ್ನಲಾಗಿದೆ.
ಈ ವರ್ಷಾಂತ್ಯಕ್ಕೆ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಈಗ ಹರಿದಾಡುತ್ತಿದೆ. ಆದರೆ ಇದುವರೆಗೆ ಇಬ್ಬರೂ ತಾವಿಬ್ಬರೂ ಡೇಟಿಂಗ್ ಮಾಡುತ್ತಿರುವುದಾಗಿ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ವಿಜಯ್ ಮತ್ತು ರಶ್ಮಿಕಾ ಈಗಿನ ಕಮಿಟ್ ಮೆಂಟ್ ಗಳನ್ನು ಮುಗಿಸಿಕೊಂಡು ಮದುವೆ ಬಗ್ಗೆ ಯೋಚಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.