ಲಕ್ನೋ : ಮದುವೆಯಾಗಿದ್ದಕ್ಕೆ ಪಾರ್ಟಿ ನೀಡಲಿಲ್ಲವೆಂದು ನವವಿವಾಹಿತನೊಬ್ಬನನ್ನು  ಆತನ ಗೆಳೆಯರು ಕೊಲೆ  ಮಾಡಿದ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಪಾಲಿಮುಕಿಮ್ಪುರ ಗ್ರಾಮದಲ್ಲಿ ನಡೆದಿದೆ.
									
										
								
																	
ಮೃತ ವ್ಯಕ್ತಿಗೆ ಇದು ಎರಡನೇ ಮದುವೆಯಾಗಿತ್ತು. ಮದುವೆಯಾದ ಬಳಿಕ ಸ್ನೇಹಿತರ ಮನೆಗೆ ಹೋಗಿದ್ದಾನೆ. ಅಲ್ಲಿ ಆತನ ಗೆಳೆಯರೆಲ್ಲ ಸೇರಿ ಪಾರ್ಟಿ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಆ ವೇಳೆ ಆತ ಪಾರ್ಟಿ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಅವರ ನಡುವೆ ಜಗಳ ನಡೆದಿದ್ದು, ಕೋಪಗೊಂಡ ಸ್ನೇಹಿತರು ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
									
			
			 
 			
 
 			
			                     
							
							
			        							
								
																	ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.