Publish Date: Sat, 27 Aug 2022 (10:50 IST)
Updated Date: Sat, 27 Aug 2022 (11:00 IST)
ಮುಂಬೈ: ಬಿಜೆಪಿ ನಾಯಕಿ, ನಟಿ ಸೊನಾಲಿ ಪೋಘಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಸಂಖ್ಯೆ ಈಗ ನಾಲ್ಕಕ್ಕೇರಿದೆ.
ನಟಿ ಸಾವು ಸಹಜವಾಗಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಪೊಲೀಸರು ನಟಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಪಬ್ ನ ಮಾಲಿಕ ಹಾಗೂ ಅಲ್ಲಿನ ಬಾತ್ ರೂಂನಿಂದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಪಾರ್ಟಿಯಲ್ಲಿ ಸೊನಾಲಿಗೆ ಮದ್ಯದಲ್ಲಿ ಡ್ರಗ್ಸ್ ನೀಡಲಾಗಿತ್ತು ಎನ್ನಲಾಗಿದೆ. ನಟಿಯ ಕೊನೆಯ ಕ್ಷಣಗಳ ಸಿಸಿಟಿವಿ ದಶ್ಯಗಳು ಇದಕ್ಕೆ ಪುರಾವೆ ನೀಡುತ್ತಿದೆ. ಹೀಗಾಗಿ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.