ಲಕ್ನೋ : ಈ ಬಾರಿಯ ಶ್ರೀರಾಮನವಮಿಯಂದು ಧಂಗೆಗಳನ್ನು ಮರೆತು ಬಿಡಿ, ಯಾವುದೇ ಜಗಳವೂ ಉತ್ತರಪ್ರದೇಶದಲ್ಲಿ ನಡೆದಿಲ್ಲ.
ಇದು ಹೊಸ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು. ರಾಮನವಮಿ ಮೆರವಣಿಗೆಯ ಸಮಯದಲ್ಲಿ ಕೆಲವು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಘರ್ಷಣೆಯ ನಂತರ ಮಾತನಾಡಿದ ಅವರು,
ರಾಮನವಮಿ ಹಾಗೂ ಇದು ರಂಜಾನ್ ತಿಂಗಳಾಗಿದೆ. ಆದರೆ ಈ ಬಾರಿ ಭಾರತದಲ್ಲೇ ಅತ್ಯಂತ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಯಾವುದೇ ಘರ್ಷಣೆ ನಡೆದಿಲ್ಲ. ಇದು ಉತ್ತರ ಪ್ರದೇಶ ಹೊಸ ಅಭಿವೃದ್ಧಿ ಕಾರ್ಯಸೂಚಿಯ ಸಂಕೇತವಾಗಿದೆ ಎಂದರು.
ರಾಮನವಮಿಯನ್ನು ಇತ್ತೀಚಿಗಷ್ಟೇ ಆಚರಿಸಲಾಯಿತು. ಉತ್ತರಪ್ರದೇಶದಲ್ಲಿ 25 ಕೋಟಿ ಜನಸಂಖ್ಯೆಯಿದೆ. ರಾಜ್ಯಾದ್ಯಂತ 800 ಕಡೆಗಳಲ್ಲಿ ರಾಮನವಮಿ ಮೆರವಣಿಗೆಗಳು ನಡೆದವು. ಜೊತೆಗೆ ಇದು ರಂಜಾನ್ ತಿಂಗಳು ಆಗಿದೆ. ಅನೇಕ ಇಫ್ತಾರ್ ಕೂಟಗಳು ನಡೆದವು. ಆದರೆ ಗಲಭೆಯನ್ನು ಮರೆತು ಬಿಡಿ, ಎಲ್ಲೂ ಸಹ ಜಗಳವು ನಡೆದಿಲ್ಲ ಎಂದು ಅಭಿಪ್ರಾಯ ಪಟ್ಟರು.