Publish Date: Sun, 10 Apr 2022 (07:20 IST)
Updated Date: Sun, 10 Apr 2022 (07:25 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಂಜನೇಯ ಸ್ವಾಮಿ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತು. ಇಂತಿಪ್ಪ ಧ‍್ರುವ ಸರ್ಜಾ ಇಂದು ರಾಮನವಮಿ ದಿನ ಫ್ಯಾನ್ಸ್ ಗೆ ಭರ್ಜರಿ ಸುದ್ದಿ ಕೊಡಲು ಸಜ್ಜಾಗಿದ್ದಾರೆ.
ಧ್ರುವ ಇದೀಗ ಮಾರ್ಟಿನ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರತಂಡ ಕಾಶ್ಮೀರದಲ್ಲೂ ಚಿತ್ರೀಕರಣ ನಡೆಸಿ ಬಂದಿತ್ತು.
ಇದೀಗ ಮಾರ್ಟಿನ್ ಸಿನಿಮಾ ತಂಡ ಹೊಸ ಅಪ್ ಡೇಟ್ ಕೊಡಲು ಮುಂದಾಗಿದೆ. ಅದರಂತೆ ಇಂದು ಮಧ‍್ಯಾಹ್ನ 12.12 ಕ್ಕೆ ಸಿನಿಮಾ ತಂಡದಿಂದ ಸಿಹಿ ಸುದ್ದಿ ಸಿಗಲಿದೆ. ಅಲ್ಲಿಯವರೆಗೂ ಫ್ಯಾನ್ಸ್ ಕಾಯಬೇಕು.