Publish Date: Sun, 10 Apr 2022 (06:12 IST)
Updated Date: Sun, 10 Apr 2022 (06:15 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟು ಇದೀಗ ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿಯಾಗಿರುವ ಸಹಜ ಸುಂದರಿ ಮೇಘಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಫೋಟೋ ಒಂದು ಎಲ್ಲರ ಗಮನ ಸೆಳೆದಿದೆ.
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗಿರುವ ಫೋಟೋವನ್ನು ಮೇಘಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದು, ಮಹೇಶ್ ಬಾಬು ಸರ್ ಜೊತೆಗೆ ನಟಿಸಿದ್ದು ಅದ್ಭುತ ಅನುಭವ ಎಂದಿದ್ದಾರೆ.
ಆದರೆ ಮೇಘಾ ಶೆಟ್ಟಿ ಮಹೇಶ್ ಬಾಬು ಜೊತೆ ಯಾವ ಕಾರಣಕ್ಕೆ ಜೊತೆಯಾಗಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಏನೇ ಆದರೂ ಕಿರುತೆರೆಯಲ್ಲಿ ಮಿಂಚುತ್ತಿರುವ ಹುಡುಗಿ ಇದೀಗ ಏಕಾಏಕಿ ಸೂಪರ್ ಸ್ಟಾರ್ ಜೊತೆ ಕಾಣಿಸಿಕೊಂಡಿರುವುದು ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿದೆ.