ಬೆಂಗಳೂರು: ಒಂದೆಡೆ ಕೆಜಿಎಫ್ 2 ಸಿನಿಮಾ ತಂಡ, ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಎರಡೂ ತಂಡಗಳೂ ಒಟ್ಟಿಗೇ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡಲು ಮುಂದಾಗಿದೆ.
ಹೊಂಬಾಳೆ ಫಿಲಂಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ನಾಳೆ 11.15 ಕ್ಕೆ ವಿಶೇಷ ಸುದ್ದಿ ಕೊಡಲಿರುವುದಾಗಿ ಘೋಷಿಸಿದೆ. ಎರಡು ದೊಡ್ಡ ಕನಸುಗಳು ಜೊತೆಯಾಗುತ್ತಿವೆ ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಮಾಡಿದರೆ ಇತ್ತ ಆರ್ ಸಿಬಿ ಬೆಂಗಳೂರಿನಲ್ಲಿ ಎರಡು ಶ್ರೇಷ್ಠ ಕನಸುಗಳು ದೇಶವನ್ನೇ ಥ್ರಿಲ್ ಮಾಡಲಿದೆ ಎಂದು ಟ್ವೀಟ್ ಮಾಡಿದೆ.
ಹೀಗಾಗಿ ಇಬ್ಬರೂ ಜೊತೆಯಾಗಿ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡಲು ಹೊರಟಿರುವುದು ಪಕ್ಕಾ ಆಗಿದೆ. ಅದು ಯಾವ ಸುದ್ದಿ ಇರಬಹುದು ಎಂದು ಫ್ಯಾನ್ಸ್ ಕುತೂಲಹದಿಂದ ಎದಿರುನೋಡುವಂತಾಗಿದೆ.