Select Your Language

Notifications

webdunia
webdunia
webdunia
webdunia

ವಯನಾಡು ಸಂತ್ರಸ್ತರಿಗೆ ತನ್ನವರಿಲ್ಲದ ನೋವಿನ ಜತೆ ಕಳ್ಳರ ಕಾಟ ಬಲು ಜೋರು

Wayanad LandSlide Tragedy

Sampriya

, ಭಾನುವಾರ, 4 ಆಗಸ್ಟ್ 2024 (15:53 IST)
ವಯನಾಡು: ವಯನಾಡಿನಲ್ಲಿ ಭೀಕರ ಭೂಕುಸತಕ್ಕೆ ತನ್ನವರನ್ನು ಕಳೆದುಕೊಂಡ ನೋವಿನಲ್ಲಿರುವ ಸಂತ್ರಸ್ತರಿಗೆ ಕಳ್ಳರ ಕಾಟ ಶುರುವಾಗಿದೆ. ಹಾನಿಗೊಳಗಾಗಿರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಬೆಳಕಿಗೆ ಬರುತ್ತಿವೆ.

ಭೀಕರ ಭೂಕುಸಿತದ ನಂತರ ಸಂತ್ರಸ್ಥರನ್ನು ವಯನಾಡಿನ ಪುನರ್ವಸತಿ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗಿದೆ. ಇಂತವರ ಮನೆಯನ್ನು  ಗುರಿಯಾಗಿಸಿಕೊಂಡು ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ. ಹಾನಿಗೊಳಗಾದ ಮನೆಗಳಿಗೆ ಕಳ್ಳರು ನುಗ್ಗಿ ಅಳಿದುಳಿದ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ ಎಂದು ಜನರು ದೂರಿದ್ದಾರೆ.

ಮನೆಯಲ್ಲಿರುವ ಮೌಲ್ಯಯುತವಾದ ವಸ್ತುಗಳನ್ನು ಟಾರ್ಗೆಟ್ ಮಾಡಿ  ಕಳ್ಳತನ ಮಾಡುತ್ತಿದ್ದಾರೆ ಎಂದು ಸಂತ್ರಸ್ತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ದೂರು ಬಂದ ಹಿನ್ನೆಲೆ ಪೊಲೀಸರು ಘಟನೆ ನಡೆದ ಸ್ಥಳಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ, ಪರಿಹಾರಕ್ಕೆ ತೀರ್ಮಾನ: ಪರಮೇಶ್ವರ್‌