ನವದೆಹಲಿ: ಸಾಲು ಸಾಲು ಹಬ್ಬದ ಸಂಭ್ರಮದ ವೇಳೆ ಆಹಾರ ವಿತರಣಾ ಅಪ್ಲಿಕೇಶನ್ ಆದ ಝೊಮಾಟೊ ತನ್ನ ಪ್ರತಿ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು 10ಕ್ಕೆ ಹೆಚ್ಚಳ ಮಾಡಿದೆ.
ಎರಡೂ ಪ್ಲಾಟ್‌ಫಾರ್ಮ್ ಶುಲ್ಕವನ್ನು ₹10ಕ್ಕೆ ಹೆಚ್ಚಿಸಿದ ನಂತರ ಆಹಾರ ಪ್ರಿಯರು ಶಾಕ್ ಆಗಿದ್ದಾರೆ. Zomato ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ ಆರ್ಡರ್‌ಗೆ ₹10 ಕ್ಕೆ ಹೆಚ್ಚಿಸಿದೆ.
Zomato ಆಗಸ್ಟ್ 2023 ರಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತು, ಪ್ರತಿ ಆರ್ಡರ್‌ಗೆ ₹2 ಶುಲ್ಕ ವಿಧಿಸಿತ್ತು. ಜನವರಿ 2024 ರ ಹೊತ್ತಿಗೆ, ಝೊಮಾಟೊ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ ₹4 ಕ್ಕೆ ಏರಿಸಿತು. ಇದೀಗ, ಇದು ಪ್ರತಿ ಆರ್ಡರ್‌ಗೆ ₹10 ಶುಲ್ಕವನ್ನು ವಿಧಿಸುತ್ತದೆ.
ಪ್ಲಾಟ್‌ಫಾರ್ಮ್ ಶುಲ್ಕವು ಎಲ್ಲಾ ಗ್ರಾಹಕರಿಗೆ, ಗೋಲ್ಡ್ ಸದಸ್ಯರಿಗೂ ಅನ್ವಯಿಸಲಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ 10ರೂಪಾಯಿ ಹೆಚ್ಚಳಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿ ಹಣ ಹೆಚ್ಚಳ ಮಾಡಿದರೆ ತುಂಬಾ ದುಬಾರಿಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಆಹಾರ ಆರ್ಡರ್ ಮಾಡುವಿಕೆಯು ಉಚಿತ ವಿತರಣೆಯೊಂದಿಗೆ ಪ್ರಾರಂಭವಾಯಿತು, ಈಗ GST, ವಿತರಣೆ ಮತ್ತು ಪ್ಯಾಕಿಂಗ್ ಶುಲ್ಕಗಳು, ಪ್ಲಾಟ್‌ಫಾರ್ಮ್ ಶುಲ್ಕ" ಎಂದು ಫಿನ್‌ಫ್ಲುಯೆನ್ಸರ್ ರವಿಸುತಾಂಜನಿ ಬರೆದಿದ್ದಾರೆ.<>