Webdunia - Bharat's app for daily news and videos

Install App

ಪ್ರತಿ ಆರ್ಡರ್‌ಗೆ ₹10 ಶುಲ್ಕ ಹೆಚ್ಚಿಸಿದ Zomato ನಡೆಗೆ ಆಹಾರ ಪ್ರಿಯರು ಶಾಕ್‌

Sampriya
ಗುರುವಾರ, 24 ಅಕ್ಟೋಬರ್ 2024 (16:26 IST)
Photo Courtesy X
ನವದೆಹಲಿ: ಸಾಲು ಸಾಲು ಹಬ್ಬದ ಸಂಭ್ರಮದ ವೇಳೆ ಆಹಾರ ವಿತರಣಾ ಅಪ್ಲಿಕೇಶನ್‌ ಆದ ಝೊಮಾಟೊ ತನ್ನ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು 10ಕ್ಕೆ ಹೆಚ್ಚಳ ಮಾಡಿದೆ.

 ಎರಡೂ ಪ್ಲಾಟ್‌ಫಾರ್ಮ್ ಶುಲ್ಕವನ್ನು ₹10ಕ್ಕೆ ಹೆಚ್ಚಿಸಿದ ನಂತರ ಆಹಾರ ಪ್ರಿಯರು ಶಾಕ್ ಆಗಿದ್ದಾರೆ. Zomato ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ  ಆರ್ಡರ್‌ಗೆ ₹10 ಕ್ಕೆ ಹೆಚ್ಚಿಸಿದೆ.

Zomato ಆಗಸ್ಟ್ 2023 ರಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತು, ಪ್ರತಿ ಆರ್ಡರ್‌ಗೆ ₹2 ಶುಲ್ಕ ವಿಧಿಸಿತ್ತು. ಜನವರಿ 2024 ರ ಹೊತ್ತಿಗೆ, ಝೊಮಾಟೊ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ ₹4 ಕ್ಕೆ ಏರಿಸಿತು. ಇದೀಗ, ಇದು ಪ್ರತಿ ಆರ್ಡರ್‌ಗೆ ₹10 ಶುಲ್ಕವನ್ನು ವಿಧಿಸುತ್ತದೆ.

ಪ್ಲಾಟ್‌ಫಾರ್ಮ್ ಶುಲ್ಕವು ಎಲ್ಲಾ ಗ್ರಾಹಕರಿಗೆ, ಗೋಲ್ಡ್ ಸದಸ್ಯರಿಗೂ ಅನ್ವಯಿಸಲಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ 10ರೂಪಾಯಿ ಹೆಚ್ಚಳಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿ ಹಣ ಹೆಚ್ಚಳ ಮಾಡಿದರೆ  ತುಂಬಾ ದುಬಾರಿಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

"ಆಹಾರ ಆರ್ಡರ್ ಮಾಡುವಿಕೆಯು ಉಚಿತ ವಿತರಣೆಯೊಂದಿಗೆ ಪ್ರಾರಂಭವಾಯಿತು, ಈಗ GST, ವಿತರಣೆ ಮತ್ತು ಪ್ಯಾಕಿಂಗ್ ಶುಲ್ಕಗಳು, ಪ್ಲಾಟ್‌ಫಾರ್ಮ್ ಶುಲ್ಕ" ಎಂದು ಫಿನ್‌ಫ್ಲುಯೆನ್ಸರ್ ರವಿಸುತಾಂಜನಿ ಬರೆದಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments