Select Your Language

Notifications

webdunia
webdunia
webdunia
webdunia

ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದೆ : ಶೋಭಾ

ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದೆ : ಶೋಭಾ
ಅಂಕೋಲಾ , ಶನಿವಾರ, 18 ಸೆಪ್ಟಂಬರ್ 2021 (11:37 IST)
ಅಂಕೋಲಾ : 'ಕೋವಿಡ್ ಸಂದರ್ಭದಲ್ಲಿಯೂ ಆಹಾರ ಉತ್ಪಾದನೆಯಲ್ಲಿ ದೇಶ ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷ ದೇಶದಲ್ಲಿ 305 ಮಿಲಿಯನ್ ಟನ್ ಆಹಾರ ಉತ್ಪಾದನೆ ಮತ್ತು 326 ಮಿಲಿಯನ್ ಟನ್ ತರಕಾರಿ ಉತ್ಪಾದನೆ ಮಾಡಿದ್ದು ದಾಖಲೆಯಾಗಿದೆ' ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಹೊಸಗದ್ದೆಯ ಬಿ.ಜೆ.ಪಿ ಬೂತ್ ಘಟಕದ ಅಧ್ಯಕ್ಷ ಸೋಮೇಶ್ವರ ಗೌಡ ಅವರ ಮನೆಯಲ್ಲಿ ನಾಮಫಲಕ ಅಂಟಿಸಿ ಮಾತನಾಡಿದ ಅವರು, 'ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸಲು ರೈತರಿಗೆ ತರಬೇತಿ ಮತ್ತು ಮಾಹಿತಿ ಅವಶ್ಯಕತೆ ಇದೆ. ಕೃಷಿ ವಲಯದಲ್ಲಿ ಇಂದಿಗೂ ಹಲವು ಸಮಸ್ಯೆಗಳಿವೆ. ರೈತರ ಆದಾಯ ದ್ವಿಗುಣಗೊಳಿಸಲು ಅಗತ್ಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಆಹಾರ ಸಂಸ್ಕರಣೆ ಮತ್ತು ಸಂಗ್ರಹಣೆ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಅವರು ಹೇಳಿದರು.
'ಮಾರಣಾಂತಿಕ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಿಂದಿನ ಸರ್ಕಾರ ಹೊರ ರಾಷ್ಟ್ರಗಳಲ್ಲಿ ತಯಾರಿಸಿದ ಲಸಿಕೆಯನ್ನು 3-4 ವರ್ಷಗಳ ನಂತರ ದೇಶದ ಜನರಿಗೆ ವಿತರಣೆ ಮಾಡುತ್ತಿತ್ತು. ಮೋದಿ ಸರ್ಕಾರ ಕೋವಿಡ್ ಕಾಣಿಸಿಕೊಂಡ 11 ತಿಂಗಳಲ್ಲಿ ಸ್ವದೇಶಿ ಲಸಿಕೆ ಸಿದ್ಧಪಡಿಸಿ ಜನರಿಗೆ ವಿತರಿಸಿದೆ' ಎಂದು ಸಚಿವರು ಹೇಳಿದರು.
ರಿಕ್ಷಾ ಚಲಾಯಿಸಿ ಪರಿಶ್ರಮದಿಂದ ಪ್ರಾಮಾಣಿಕವಾಗಿ ಜೀವನ ನಡೆಸುತ್ತಿರುವ ಕಾರ್ಯಕರ್ತರ ಮನೆಯಲ್ಲಿ ನಾಮ ಫಲಕ ಅಂಟಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಮ್ಮೆ ತಂದಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ನ ಶೇ.86 ರಷ್ಟು ಮಂದಿಯಲ್ಲಿ ಕೋವಿಡ್-19 ಪ್ರತಿಕಾಯ