Select Your Language

Notifications

webdunia
webdunia
webdunia
webdunia

ಎಲ್ಲಾ ಕಡತ ಹಾಗೂ ಪತ್ರಗಳನ್ನು e-office ಮೂಲಕವೇ ನಿರ್ವಹಿಸಲು ರಾಜ್ಯ ಸರ್ಕಾರದಿಂದ ಆದೇಶ

ಎಲ್ಲಾ ಕಡತ ಹಾಗೂ ಪತ್ರಗಳನ್ನು e-office ಮೂಲಕವೇ ನಿರ್ವಹಿಸಲು ರಾಜ್ಯ ಸರ್ಕಾರದಿಂದ ಆದೇಶ
ಬೆಂಗಳೂರು , ಗುರುವಾರ, 16 ಸೆಪ್ಟಂಬರ್ 2021 (14:14 IST)
ಬೆಂಗಳೂರು : ಆಡಳಿತವನ್ನು ಮತ್ತಷ್ಟು ದಕ್ಷ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಇದೇ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಎಲ್ಲಾ ಜಿಲ್ಲಾಧಿಕಾರಿಗಳ/ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ/ ಇಲಾಖಾ ಮುಖ್ಯಸ್ಥರುಗಳ ಕಚೇರಿಗಳಲ್ಲಿ, ಎಲ್ಲಾ ಕಡತ ಹಾಗೂ ಪತ್ರಗಳನ್ನು e-office ಮೂಲಕವೇ ನಿರ್ವಹಿಸುವ ಆದೇಶ ಹೊರಡಿಸಲಾಗಿದೆ.

ಕಾರ್ಯದರ್ಶಿಗಳು ಸಾಧ್ಯವಾದಷ್ಟು ತಮ್ಮ ಮಟ್ಟದಲ್ಲೇ ವಿಷಯವನ್ನು ವಿಲೇವಾರಿಗೊಳಿಸಲು ಅಥವಾ ಸಂಬಂಧಿಸಿದ ಸಚಿವರಿಗೆ ಆದೇಶಕ್ಕಾಗಿ ಸಲ್ಲಿಸಬೇಕು. ಅಸಾಧಾರಣ ಪ್ರಕರಣಗಳ e-office ಕಡತಗಳನ್ನು ಮಾತ್ರ ಕಾರ್ಯದರ್ಶಿಯವರು ಸಂಬಂಧಿಸಿದ ಉಪಕಾರ್ಯದರ್ಶಿಗಳಿಗೆ ಕಳುಹಿಸಬಹುದೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಎಲ್ಲಾ ಜಿಲ್ಲಾಧಿಕಾರಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಣಾಧಿಕಾರಿಗಳ ಮತ್ತು ಎಲ್ಲಾ ಇಲಾಖೆ ಮುಖ್ಯಸ್ಥರುಗಳ ಕಛೇರಿಗಳಲ್ಲಿ ರಾಜ್ಯ ಸರ್ಕಾರವು NIC ಅವರು ಅಭಿವೃದ್ಧಿ ಪಡಿಸಿರುವ e-office ತಂತ್ರಾಂಶವನ್ನು ಪರಿಚಯಿಸಿದೆ. e-office ತಂತ್ರಾಂಶದಲ್ಲಿಯೇ ಎಲ್ಲಾ ಹೊಸ ಕಡತಗಳನ್ನು ಸೃಜಿಸಿ ನಂತರದ ಪ್ರಕ್ರಿಯೆಗಳನ್ನು ಸಹ ಈ ತಂತ್ರಾಂಶದಲ್ಲಿಯೇ ಮಾಡಬೇಕೆಂದು ಸೂಚನೆ ಸಹ ನೀಡಲಾಗಿದೆ.
ಇತ್ತೀಚಿಗೆ ಜರುಗಿದ ಕಾರ್ಯದರ್ಶಿಗಳ ಸಭೆಯಲ್ಲಿ ಕಡತಗಳ ಚಲನವನವನ್ನು ಮತ್ತು ಕಡತಗಳ ನಿರ್ವಹಣಾ ಹಂತಗಳನ್ನು ಕಡಿಮೆ ಮಾಡಲು ಮಾನ್ಯ ಮುಖ್ಯಮಂತ್ರಿಗಳು ನಿರ್ದೇಶಿಸಿರುತ್ತಾರೆ. ಮುಂದುವರೆದು ಜಿಲ್ಲಾಧಿಕಾರಿಗಳು / ಇಲಾಖಾ ಮುಖ್ಯಸ್ಥರುಗಳಿಂದ ಸ್ವೀಕರಿಸಲಾಗುವ ಪ್ರಸ್ತಾವನೆಗಳನ್ನು ಕಾರ್ಯದರ್ಶಿಗಳ ಹಂತದಲ್ಲಿಯೇ ನಿರ್ವಹಿಸತಕ್ಕದ್ದೆಂದು ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿರುತ್ತಾರೆ.ಆದ್ದರಿಂದ ಈ ಕೆಳಗಿನಂತೆ ಆದೇಶಿಸಿಸಲಾಗಿದೆ.
1. ದಿನಾಂಕ 1-10-21 ರಿಂದ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇಲಾಖಾ ಮುಖ್ಯಸ್ಥರುಗಳು ತಮ್ಮ ಪ್ರಸ್ತಾವನೆಗಳು, ಪತ್ರಗಳು ಹಾಗೂ ವರದಿಗಳನ್ನು ಸಂಬಂಧಪಟ್ಟ ಸರ್ಕಾರದ ಕಾರ್ಯದರ್ಶಿಗೆ ಪ್ರಸ್ತಾವನೆಗಳನ್ನು ಏಕ ಕಡತ ರೀತಿಯಲ್ಲಿ e-office ಮೂಲಕವೇ ಕಳಿಸಬೇಕು.
2.ಕಾರ್ಯದರ್ಶಿಗಳು ಸಾಧ್ಯವಾದಷ್ಟು ತಮ್ಮ ಮಟ್ಟದಲ್ಲೇ ವಿಷಯವನ್ನು ವಿಲೀನಗೊಳಿಸಬೇಕು.ಅಥವಾ ಸಂಬಂಧಿಸಿದ ಸಚಿವರಿಗೆ ಆದೇಶಕ್ಕಾಗಿ ಸಲ್ಲಿಸಬೇಕು.ವಿಷಯದ ಬಗ್ಗೆ ಹೆಚ್ಚುವರಿ ಮಾಹಿತಿ ಬೇಕಾಗುವಂತ ಅಸಾಧಾರಣ ಪ್ರಕರಣಗಳ e-office ಕಡತಗಳನ್ನು ಅಥವಾ ಸಚಿವ ಸಂಪುಟ ಟಿಪ್ಪಣಿಯನ್ನು ತಯಾರಿಸಿ ಸಚಿವ ಸಂಪುಟದ ಮುಂದೆ ತರಬೇಕಾದ ವಿಷಯಗಳಿಗೆ ಸಂಬಂಧಿಸಿದ ಕಾರ್ಯದರ್ಶಿಗೆ ಸಂಬಂಧಿಸಿದ e-office ಏಕ ಕಡತಗಳನ್ನು ಮಾತ್ರ ಕಾರ್ಯದರ್ಶಿಯವರು ಸಂಬಂಧಿಸಿದ ಉಪ ಕಾರ್ಯದರ್ಶಿಗಳಿಗೆ ಕಳುಹಿಸಬಹುದು.
3.ಅಂತಯೇ ಸಚಿವಾಲಯಕ್ಕೆ ಕಳುಹಿಸುವ ಎಲ್ಲಾ ಪತ್ರಗಳು, ವರದಿಗಳನ್ನು e-office  ನಲ್ಲಿ ಸ್ವೀಕೃತಿಗಳಾಗಿ ಕಳಿಸಬೇಕು.
4. e-office  ವ್ಯವಸ್ಥೆಗೆ ಬದಲಾವಣೆ ಮಾಡಿಕೊಳ್ಳುವಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಈ ಬಗ್ಗೆ ನೆರವು ಪಡೆಯಲು NIC,center for e ಇವರನ್ನು ಸಂಪರ್ಕಿಸಬಹುದು. 5.ಈ ಆದೇಶ ದಿನಾಂಕ 1-10 ರಿಂದ ಜಾರಿಗೆ ಬರುತ್ತದೆ.ಈ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಯನ್ನು ಹೊಣೆಗಾರಿಕೆ ಮಾಡಲಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನದಲ್ಲಿ ಡೆನ್ಮಾರ್ಕ್ ನ ಫಾರೋ ದ್ವೀಪಗಳಲ್ಲಿ 1400 ಡಾಲ್ಫಿನ್ ಗಳ ಮಾರಣಹೋಮ