Select Your Language

Notifications

webdunia
webdunia
webdunia
webdunia

ಮನೆಯೊಂದರಲ್ಲಿ ಅಜ್ಜಿ ಸೇರಿ ಐವರ ಮೃತದೇಹ ಪತ್ತೆ

ಮನೆಯೊಂದರಲ್ಲಿ ಅಜ್ಜಿ ಸೇರಿ ಐವರ ಮೃತದೇಹ ಪತ್ತೆ
ನವದೆಹಲಿ , ಶನಿವಾರ, 7 ಅಕ್ಟೋಬರ್ 2017 (18:41 IST)
ನವದೆಹಲಿ: ಅಜ್ಜಿ ಹಾಗೂ ಆಕೆಯ ಮೂವರು ಹೆಣ್ಣುಮಕ್ಕಳು ಸೇರಿದಂತೆ ಐವರ ಶವ ದೆಹಲಿಯ ಮನೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಂದಾಲ್ ಕುಟುಂಬಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಗಾರ್ಡ್ ಸೇರಿದಂತೆ ಐವರ ಶವ ಇಲ್ಲಿನ ಮಾನಸಸರೋವರ ಪಾರ್ಕ್ ಪ್ರದೇಶದ ಮನೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಊರ್ಮಿಳಾ ಜಿಂದಾಲ್(82), ಸಂಗೀತಾ(56), ನೂಪುರ್(48) ಹಾಗೂ ಅಂಜಲಿ(38) ಹಾಗೂ ಗಾರ್ಡ್ ರಾಕೇಶ್ (42) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಕುರಿತು ಪೊಲೀಸ್ ಠಾಣೆಗೆ ದೂರವಾಣಿ ಕರೆ ಬಂದಿದ್ದು, ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ ಎಂದು ಡಿಸಿಪಿ ನೂಪುರ್ ಪ್ರಸಾದ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಯಾವುದೇ ವಸ್ತುಗಳು ಕಳುವಾಗಿಲ್ಲ. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತನಿಖೆಯಿಂದ ಹೊರಬರಬೇಕು. ಯಾರೂ ಸಹ ಮನೆಯ ಒಳಗೆ ಪ್ರವೇಶ ಮಾಡಿಲ್ಲ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರೇ ಎಚ್ಚರ: ಆ.13 ರಂದು ಪೆಟ್ರೋಲ್ ಬಂಕ್‌ಗಳು ಬಂದ್