ಕಠ್ಮಂಡು : ರಾಜಕೀಯ ಒಮ್ಮತಗಳನ್ನು ರೂಪಿಸಲು ವಿಫಲವಾಗಿದ್ದ ಹಾಗೂ 2 ವರ್ಷಗಳಿಗೂ ಅಧಿಕ ಕಾಲ ಚರ್ಚೆಯಲ್ಲಿದ್ದ ದೇಶದ ಮೊದಲ ಪೌರತ್ವ ತಿದ್ದುಪಡಿ ಮಸೂದೆಯನ್ನು ನೇಪಾಳದ ಸಂಸತ್ತು ಅಂಗೀಕರಿಸಿದೆ.
ನೇಪಾಳಿ ಪುರುಷರನ್ನು ವಿವಾಹವಾಗುವ ವಿದೇಶಿ ಮಹಿಳೆಯರು ಪೌರತ್ವವನ್ನು ಪಡೆಯಲು 7 ವರ್ಷಗಳು ಬೇಕಿತ್ತು. ಇದರಿಂದಾಗಿ ಅವರು ಶಿಕ್ಷಣ ಸೇರಿದಂತೆ ಎಲ್ಲಾ ಮೂಲಭೂತ ಸೇವೆಗಳಿಂದ ವಂಚಿತರಾಗುತ್ತಿದ್ದರು.
ಆದರೆ ಇದೀಗ ಗೃಹ ಸಚಿವ ಬಾಲಕೃಷ್ಣ ಖಂಡ್ ಅವರು ನೇಪಾಳದ ಮೊದಲ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು, 2006ರಲ್ಲಿ ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಲಾಗಿತ್ತು. ಅದರಂತೆ ಸಂವಿಧಾನದ ನಿರ್ದೇಶನದಂತೆ ಪೌರತ್ವವನ್ನು ಒದಗಿಸಲು ಸಹಕಾರ ನೀಡಿ ಎಂದು ಹೇಳಿದರು.