Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಬೆಂಕಿ ಅವಘಡ : ಮನೆಯಲ್ಲಿದ್ದ ಇಬ್ಬರು ಮಕ್ಕಳು ಸೇರಿ 6 ಮಂದಿ ಸಜೀವ ದಹನ!

webdunia
ಭಾನುವಾರ, 18 ಡಿಸೆಂಬರ್ 2022 (12:11 IST)
ಹೈದರಾಬಾದ್ : ಮಧ್ಯರಾತ್ರಿ ಮಲಗಿದ್ದ ವೇಳೆ ಏಕಾಏಕಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ 6 ಮಂದಿ ಸಜೀವ ದಹನಗೊಂಡಿರುವ ಘಟನೆ ತೆಲಂಗಾಣದ ಮಂಚಾರ್ಯಾಲದಲ್ಲಿ ನಡೆದಿದೆ.

ಶಿವಯ್ಯ ಮತ್ತು ಪದ್ಮಾ ದಂಪತಿ ತೆಲಂಗಾಣದ ಮಂದಮರ್ರಿ ಮಂಡಲದ ವೆಂಕಟಾಪುರದ ಮನೆಯಲ್ಲಿ ವಾಸವಾಗಿದ್ದರು. ಮನೆಗೆ ಪದ್ಮಾ ಅವರ ತಂಗಿ ಮಗಳು ಮೌನಿಕ ಮತ್ತು ಆಕೆಯ ಇಬ್ಬರು ಮಕ್ಕಳು ಬಂದಿದ್ದರು.

ರಾತ್ರಿ ಊಟ ಮಾಡಿ ಮಲಗಿದ ಬಳಿಕ 12 ರಿಂದ 12:30ರ ವೇಳೆಗೆ ಏಕಾಏಕಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರೆಲ್ಲ ನಿದ್ದೆಯಲ್ಲಿದ್ದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಬಲಿಯಾಗಿದ್ದಾರೆ. 

ಘಟನೆ ಕುರಿತು ಮಾಹಿತಿ ಹಂಚಿಕೊಂಡಿರುವ ಮಂದಮರ್ರಿಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್, ಮನೆಯ ಯಜಮಾನ, ಶಿವಯ್ಯ (50), ಪದ್ಮಾ (45), ಪದ್ಮಾ ಅವರ ತಂಗಿ ಮಗಳು ಮೌನಿಕ (23) ಮತ್ತು ಆಕೆಯ ಇಬ್ಬರು ಮಕ್ಕಳು ಸಜೀವ ದಹನಗೊಂಡಿದ್ದಾರೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಆನೆ ಬಲರಾಮನಿಗೆ ಫೈರಿಂಗ್