Select Your Language

Notifications

webdunia
webdunia
webdunia
webdunia

ಪುರಾತನ ದ್ವಾರಕಾನಗರಿಯಲ್ಲಿದ್ದಂತೆ ಭಾಸವಾಗುತ್ತಿದೆ

narendra modhi
ಗುಜರಾತ್‌ : ನದಿಯಲ್ಲಿ ಮಿಂದು ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಧಾನಿ ನರೇಂದ್ರ ಮೋದಿ ಇಂದು ಪುರಾಣ ಪ್ರಸಿದ್ದ ದ್ವಾರಕಾನಗರಿಗೆ ಭೇಟಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಸಮುದ್ರದಲ್ಲಿ ಮುಳುಗಿದೆಯೆಂದು ನಂಬಲಾಗಿರುವ ದ್ವಾರಕ ನಗರದಲ್ಲಿ ಪ್ರಾರ್ಥಿಸುವುದೇ ಒಂದು ದೈವಿಕ ಅನುಭವ ಎಂದು ಹೇಳಿದ್ದಾರೆ.

ಜೊತೆಗೆ, ಆಧ್ಯಾತ್ಮಿಕ ಭವ್ಯತೆಯಿಂದ ಕೂಡಿರುವ ನಮ್ಮ ಪರಂಪರೆಯೊಂದಿಗೆ ಹಾಗೂ  ಕಾಲಾತೀತವಾದ ಭಕ್ತಿಯೊಂದಿಗೆ ಪುರಾತನ ದ್ವಾರಕೆಯಲ್ಲಿದ್ದಹಾಗೆಯೇ ಭಾಸವಾಯ್ತು ಎಂದು ಮೋದಿ ಹೇಳಿಕೊಂಡಿದ್ದಾರೆ. ಭಗವಾನ್‌ ಶ್ರೀ ಕಷ್ಣ ನಮ್ಮೆಲ್ಲರನ್ನೂ ಹರಸಲಿ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರಪುರ ಶಾಸಕ ರಾಜ ವೆಂಕಟಪ್ಪ ನಾಯಕ ಅಂತಿಮ ದರ್ಶನ ಪಡೆದ ಡಿಕೆಶಿ