Select Your Language

Notifications

webdunia
webdunia
webdunia
webdunia

ತಂದೆಯಿಂದಲೇ ಸತತ 2 ವರ್ಷಗಳಿಂದ ಮಗಳ ಮೇಲೆ ಅತ್ಯಾಚಾರ!

ತಂದೆಯಿಂದಲೇ ಸತತ 2 ವರ್ಷಗಳಿಂದ ಮಗಳ ಮೇಲೆ ಅತ್ಯಾಚಾರ!
ಮುಂಬೈ , ಶುಕ್ರವಾರ, 21 ಜನವರಿ 2022 (14:33 IST)
ಮುಂಬೈ : 16 ವರ್ಷದ ಹುಡುಗಿಯೊಬ್ಬಳು ತನ್ನ ತಂದೆ ಹಾಗೂ ಸಹೋದರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರ ವೆಸಗಿರುವುದಾಗಿ ಆರೋಪಿಸಿದ್ದಾಳೆ.
 
ಸದ್ಯ ಪೊಲೀಸರು ತಂದೆ ಹಾಗೂ ಮಗ ಇಬ್ಬರನ್ನು ಬಂಧಿಸಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಶಿಕ್ಷಕಿ ಮತ್ತು ಪ್ರಾಂಶುಪಾಲರ ಬಳಿ ಈ ವಿಚಾರವನ್ನು ಹೇಳಿಕೊಂಡಾಗ ಸತ್ಯ ಬಹಿರಂಗಗೊಂಡಿದೆ. ನಂತರ ಶಾಲಾ ಅಧಿಕಾರಿಗಳು ಎನ್ಜಿಒ ಸಂಪರ್ಕಿಸಿದ್ದು, ಪೊಲೀಸರಿಗೆ ಘಟನೆ ಕುರಿತಂತೆ ದೂರು ದಾಖಲಿಸುವಂತೆ ಹುಡುಗಿಗೆ ಸಲಹೆ ನೀಡಿದ್ದಾರೆ.

2019ರ ಜನವರಿಯಲ್ಲಿ ತನ್ನ 43 ವರ್ಷದ ತಂದೆ ಮೊದಲ ಬಾರಿಗೆ ಆಕೆ ಒಂಟಿಯಾಗಿ ಮಲಗಿದ್ದನ್ನು ಕಂಡು ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದಾಳೆ. ಬಳಿಕ ಆಕೆಯ 20 ವರ್ಷದ ಸಹೋದರ ಕೂಡ ಕಿರುಕುಳ ನೀಡಿರುದಾಗಿ ತಿಳಿಸಿದ್ದಾಳೆ.

ತನ್ನ ತಂದೆ ಹಾಗೂ ಸಹೋದರ ಇದೇ ರೀತಿ ತನ್ನ ತಂಗಿಗೂ ಸಹ ಲೈಂಗಿಕವಾಗಿ ಕಿರುಕುಳ ನೀಡುತ್ತಾರೆ ಎಂಬ ಭಯದಿಂದ ಇದೀಗ ತನ್ನ ಕಷ್ಟವನ್ನು ಶಿಕ್ಷಕಿಯರ ಬಳಿ ಹೇಳಿಕೊಂಡಿರುವುದಾಗಿ ತಿಳಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸಂಪುಟ ಸರ್ಜರಿ, ಬೇಡಿಕೆ ಏನಿದೆ?