Publish Date: Sat, 01 Jan 2022 (10:10 IST)
Updated Date: Sat, 01 Jan 2022 (10:14 IST)
ಮುಂಬೈ: ಮಕ್ಕಳು ತಪ್ಪು ಮಾಡಿದಾಗ ಪೋಷಕರು ಶಿಕ್ಷಿಸುವುದು ಸಹಜ. ಆದರೆ ಮಗನನ್ನು ಶಿಕ್ಷಿಸಲು ಹೋಗಿ ಇಲ್ಲೊಬ್ಬ ತಂದೆ ಆತನನ್ನು ಕೊಂದೇ ಹಾಕಿದ್ದಾನೆ.
ಮಹಾರಾಷ್ಟ್ರದ ವಘೋಬಾ ನಗರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 10 ವರ್ಷದ ಮಗ 50 ರೂ. ಕದ್ದಿದ್ದ. ಇದೇ ಸಿಟ್ಟಿನಲ್ಲಿ ಆತನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದ.
ಪರಿಣಾಮ ಬಾಲಕ ನಿತ್ರಾಣನಾಗಿ ಬಿದ್ದಿದ್ದಾನೆ. ಬಲವಾದ ಹೊಡೆತ ಬಿದ್ದಿದ್ದರಿಂದ ಆತನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಇದೀಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.