Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

15 ರ ಬಾಲಕನ ವರಿಸಿದ 22 ವರ್ಷದ ಯುವತಿ ಅರೆಸ್ಟ್

webdunia
ಶನಿವಾರ, 1 ಜನವರಿ 2022 (10:00 IST)
ಕೋಲ್ಕೊತ್ತಾ: ಮದುವೆಗೆ ವಯೋಮಿತಿ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಅಪ್ರಾಪ್ತ ವಯಸ್ಸಿನ ಹುಡುಗ ಮದುವೆಯಾದ ಸುದ್ದಿ ಬಂದಿದೆ.

ಕೋಲ್ಕೊತ್ತಾದಲ್ಲಿ 15 ರ ಬಾಲಕನನ್ನು 22 ವರ್ಷದ ಯುವತಿ ಪ್ರೀತಿಸಿ ಗುಟ್ಟಾಗಿ ಮದುವೆಯಾಗಿದ್ದಾರೆ. 10 ನೇ ತರಗತಿ ಓದುತ್ತಿರುವ ಬಾಲಕನಿಗೆ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಡಿಸೆಂಬರ್ 25 ರಂದು ಮನೆಯಿಂದ ತಪ್ಪಿಸಿಕೊಂಡು ಹೋಗಿ ದೇವಾಲಯವೊಂದರಲ್ಲಿ ಗುಟ್ಟಾಗಿ ಮದುವೆಯಾಗಿದ್ದರು.

ಬಳಿಕ ರೈಲಿನಲ್ಲಿ ಬರುವಾಗ ಇಬ್ಬರೂ ಮುಂದಿನ ಜೀವನದ ಬಗ್ಗೆ ಮಾತನಾಡುವಾಗ ಸಹ ಪ್ರಯಾಣಿಕರಿಗೆ ಅನುಮಾನವಾಗಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬೈ ಮಿಸ್ಟೇಕ್! ಮಗಳನ್ನೇ ಕೊಂದ ತಂದೆ!