Publish Date: Fri, 31 Dec 2021 (10:18 IST)
Updated Date: Fri, 31 Dec 2021 (10:19 IST)
ನವದೆಹಲಿ: ಪರೀಕ್ಷೆಯಲ್ಲಿ ಫೇಲ್ ಆದ ಬೇಸರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿಯೇ ನೇಣಿಗೆ ಶರಣಾದ ಘಟನೆ ದೆಹಲಿಯಲ್ಲಿ ನಡೆದಿದೆ.
19 ವರ್ಷದ ವಿದ್ಯಾರ್ಥಿನಿಗೆ ಎರಡು ದಿನಗಳ ಹಿಂದೆ ಫಲಿತಾಂಶ ತಿಳಿದಿತ್ತು. ಅದರಂತೆ ಎರಡು ಸಬ್ಜೆಕ್ಟ್ ನಲ್ಲಿ ಆಕೆ ಫೇಲ್ ಆಗಿದ್ದಳು. ಇದಾದ ಬಳಿಕ ಆಕೆ ತೀವ್ರ ಬೇಸರದಲ್ಲಿದ್ದಳು ಎಂದು ಸಹಪಾಠಿಗಳು ತಿಳಿಸಿದ್ದಾರೆ.
ಇದೇ ಬೇಸರದಲ್ಲಿ ಹಾಸ್ಟೆಲ್ ನ ಖಾಲಿ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಾವಿಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.