Publish Date: Sat, 07 Dec 2019 (07:53 IST)
Updated Date: Sat, 07 Dec 2019 (07:55 IST)
ನವದೆಹಲಿ : ಅತ್ತೆ, ಸೊಸೆ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯಿಂದ ನಿವೃತ್ತ ಶಿಕ್ಷಕನೊಬ್ಬ ತನ್ನ ಪತ್ನಿ ಹಾಗೂ ಸೊಸೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಸತೀಶ್ ಚೌಧರಿ(62) ಕೊಲೆ ಮಾಡಿದ ಆರೋಪಿ, ಸ್ನೇಹಲತಾ ಚೌಧರಿ(62), ಪ್ರಜ್ಞಾ ಚೌಧರಿ(35), ಕೊಲೆಯಾದ ಅತ್ತೆ, ಸೊಸೆ. ದೆಹಲಿಯ ರೋಹಿಣಿ ನಗರದಲ್ಲಿರುವ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಸತೀಶ್ ಚೌಧರಿ ಎರಡನೇ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ಸಂಬಂಧ ವಿಜಯ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.