Publish Date: Sat, 28 Nov 2020 (09:32 IST)
Updated Date: Sat, 28 Nov 2020 (09:35 IST)
ಬೆಂಗಳೂರು : ಬೆಂಗಳೂರಿನಲ್ಲಿ 68 ವರ್ಷದ ಪಾದ್ರಿಯೊಬ್ಬರು ದೇವಾಲಯದ ಆವರಣದೊಳಗಿನ ಮಗಳ ನಿವಾಸದಲ್ಲಿ 10 ವರ್ಷದ ಬಾಲಕಿಯ ಮೇಲೆ ಮಾನಭಂಗ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಯನ್ನು ವೆಂಕಟರಮಣಪ್ಪ ಎಂದು ಗುರುತಿಸಲಾಗಿದೆ. ಈತ ತನ್ನ ಅಳಿಯನ ಅನುಪಸ್ಥಿತಿಯಲ್ಲಿ ದೇವಾಲಯವನ್ನು ನೋಡಿಕೊಳ್ಳುತ್ತಿದ್ದ. ಆ ವೇಳೆ ದೇವಾಲಯದ ಹೊರಗೆ ಆಟವಾಡುತ್ತಿದ್ದ ಬಾಲಕಿಗೆ ಸಿಹಿತಿಂಡಿಗಳನ್ನು ನೀಡುವ ನೆಪದಲ್ಲಿ ಆಮಿಷಯೊಡ್ಡಿ ಬಳಿಕ ದೇವಾಲಯದ ಆವರಣದೊಳಗಿನ ಮಗಳ ನಿವಾಸಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗಳನ್ನು ಹುಡುಕುತ್ತ ಪೋಷಕರು ಪಾದ್ರಿಯ ಬಳಿ ಬಂದಾಗ ಅಲ್ಲಿ ಅಳುತ್ತಾ ಕುಳಿತ್ತಿದ್ದ ಮಗಳು ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಾಳೆ.
ಈ ಬಗ್ಗೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಲ್ಲಿದ್ದವರ ಹೇಳಿಕೆ ಮತ್ಯು ಸಿಸಿಟಿವಿ ದೃಶ್ವವನ್ನು ಆಧರಿಸಿ ಪಾದ್ರಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.