Webdunia - Bharat's app for daily news and videos

Install App

ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹೋದರಿಯ ಬಟ್ಟೆ ಬಿಚ್ಚಿದ ಸಹೋದರ

Webdunia
ಬುಧವಾರ, 12 ಡಿಸೆಂಬರ್ 2018 (06:57 IST)
ಲಕ್ನೋ : ನೀಚ ಗುಣವಿರುವ ಮನುಷ್ಯರು ತಾವು ಪಾರಾಗಲು ಯಾವ ಕೀಳುಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಉತ್ತರ ಪ್ರದೇಶದ ಲಖಿಮ್ಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಘಟನೆಯೇ ಒಂದು ಉತ್ತಮ ಉದಾಹರಣೆ.


ವ್ಯಕ್ತಿಯೊಬ್ಬ ಮೊಬೈಲ್ ಕಳ್ಳತನ ಮಾಡಿದ್ದು, ಈ ವಿಚಾರ ತಿಳಿದ ಪೊಲೀಸರು ಆತನನ್ನು ವಿಚಾರಣೆ ಮಾಡಲು ಆತನ  ಮನೆಗೆ ಹೋಗಿದ್ದ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಸಹೋದರಿಯ ಬಟ್ಟೆ ಬಿಚ್ಚಿ ಎಲ್ಲರ ಮುಂದೆ ಆಕೆಯನ್ನು ತಂದು ನಿಲ್ಲಿಸಿ ಪೊಲೀಸರು ನನ್ನ ಸಹೋದರಿಗೆ ಕಿರುಕುಳ ನೀಡಿದ್ದಾರೆಂದು ಸಾಬೀತು ಮಾಡಲು ಪ್ರಯತ್ನ ಮಾಡಿದ್ದಾನೆ.


ವಿಚಾರಣೆ ವೇಳೆ ಪೊಲೀಸರು ಎಲ್ಲಾ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಕಾರಣ ಆರೋಪಿ ಸುಳ್ಳು ಆರೋಪ ಮಾಡಿರುವುದು ಗೊತ್ತಾಗಿದೆ. ಬಳಿಕ ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ವಿಡಿಯೋ ಆಧಾರದ ಮೇಲೆ ಆರೋಪಿ ಜೊತೆ ತನಿಖೆಯ ವೇಳೆ ತಡೆಯುಂಟು ಮಾಡಿದ್ದ ಇನ್ನು ನಾಲ್ವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಅಪಘಾತವಾದ ವಿಮಾನದಲ್ಲಿ ನೀವಿರಬೇಕಿತ್ತು, ರಾಹುಲ್ ಗಾಂಧಿಗೆ ಹೇಳಿದ ಎಕ್ಸ್ ಬಳಕೆದಾರ

Air India Plane crash: ಬೆಳ್ಳಂ ಬೆಳಿಗ್ಗೆಯೇ ಅಹಮ್ಮದಾಬಾದ್ ಗೆ ಓಡೋಡಿ ಬಂದ ಮೋದಿ video

Mysore: ಮೈಸೂರು ಪ್ರವಾಸ ಮಾಡುವವರಿಗೆ ಶಾಕ್ ಕೊಟ್ಟ ಎಂಟ್ರಿ ಫೀಸ್

Air India Plane crash: ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಮಾನ ದುರಂತಗಳು ಯಾವುವು ಗೊತ್ತಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

ಮುಂದಿನ ಸುದ್ದಿ
Show comments