Select Your Language

Notifications

webdunia
webdunia
webdunia
webdunia

ಶ್ರೀನಗರದಲ್ಲಿ ಉಗ್ರರು ಮತ್ತು ಸೇನೆಯ ನಡುವೆ ಗುಂಡಿಗ ಚಕಮಕಿ; ಇಬ್ಬರು ಉಗ್ರರ ಹತ್ಯೆ

ಶ್ರೀನಗರ
ಶ್ರೀನಗರ , ಭಾನುವಾರ, 9 ಡಿಸೆಂಬರ್ 2018 (14:11 IST)
ಶ್ರೀನಗರ : ಉಗ್ರರು ಮತ್ತು ಸೇನೆಯ ನಡುವೆ ಶ್ರೀನಗರ ಹೊರವಲಯ ಮುಜಗುಂದ್ ಪ್ರದೇಶದಲ್ಲಿ ಗುಂಡಿಗ ಚಕಮಕಿ ನಡೆದಿದೆ.


ಉಗ್ರರು ಅಡಗಿರುವ ಬಗ್ಗೆ ತಿಳಿದುಬಂದ ಮಾಹಿತಿ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ತಂಡ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು, ಸಿಆರ್ ಪಿಎಫ್ ತಂಡದಿದ ಜಂಟಿ ಕಾರ್ಯಾಚರಣೆ ನಡೆಸಿತ್ತು.


ಆ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಯ ಐವರು ಸಿಬ್ಬಂದಿಗೆ ಗಾಯವಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ತಿಂಗಳ ಈ ಎರಡು ದಿನ ಬ್ಯಾಂಕ್ ಬಂದ್ ನಡೆಯುವ ಸಾಧ್ಯತೆ ಇದೆ