Select Your Language

Notifications

webdunia
webdunia
webdunia
webdunia

ಭಾರತದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಹಿಂದೂಗಳೇ: ಭಾಗವತ್

ಮೋಹನ್ ಭಾಗವತ್
ನವದೆಹಲಿ , ಗುರುವಾರ, 17 ನವೆಂಬರ್ 2022 (13:13 IST)
ರಾಯ್ಪುರ : ಭಾರತದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಕೂಡ ಹಿಂದೂಗಳೇ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಛತ್ತೀಸ್ಘಡದ ಅಂಬಿಕಾಪುರದಲ್ಲಿ ಮಾತನಾಡಿದ ಅವರು, ಭಾರತವನ್ನು ಮಾತೃಭೂಮಿ ಎಂದು ಭಾವಿಸಿ ಇಲ್ಲಿನ ಅನೇಕತೆಯಲ್ಲಿ ಏಕತೆ ಎಂಬ ಸಂಸ್ಕೃತಿಯೊಂದಿಗೆ ಜೊತೆ ಜೊತೆಯಲ್ಲಿ ಜೀವಿಸಬೇಕು ಎಂದು ಭಾವಿಸುವವರ ಜಾತಿ ಯಾವುದೇ ಆದರೂ,

ಧರ್ಮ ಯಾವುದೇ ಆದರೂ, ಭಾಷೆ ಬೇರೆಯಾದರೂ, ಆಹಾರ ಪದ್ದತಿ, ಸಿದ್ದಾಂತಗಳು ವ್ಯತ್ಯಾಸ ಇದ್ದರೂ ಅವರೆಲ್ಲಾ ಹಿಂದೂಗಳೇ ಎಂದಿದ್ದಾರೆ.

ಆರ್ಎಸ್ಎಸ್ ಈ ವಿಚಾರವನ್ನು 1925ರಿಂದಲೂ ಪ್ರತಿಪಾದಿಸುತ್ತಿದೆ. ಪ್ರಜೆಗಳ ನಡುವೆ ಐಕ್ಯಮತವನ್ನು ಹೆಚ್ಚಿಸುವುದೇ ಆರ್ಎಸ್ಎಸ್ ಸಿದ್ದಾಂತ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಸಂಖ್ಯೆ 10 ಸಾವಿರಕ್ಕೆ ಏರಿಕೆ !?