Select Your Language

Notifications

webdunia
webdunia
webdunia
webdunia

90 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಭೂಸ್ಪರ್ಶ

Emergency landing of Air India flight, Directorate of Civil Aviation, Delhi

Sampriya

ನವದೆಹಲಿ , ಭಾನುವಾರ, 31 ಆಗಸ್ಟ್ 2025 (12:28 IST)
Photo Credit X
ನವದೆಹಲಿ: ಏರ್‌ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನವದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 

ನವದೆಹಲಿಯಿಂದಲೇ ಇಂದೋರ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಾಪಸಾಗಿದೆ. ಈ ವೇಳೆ ಫ್ಲೈಟ್‌ನ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ನಿಮಿಷ ವಿಮಾನ ಹಾರಾಟ ನಡೆಸಿದೆ. ಬೆಂಕಿ ಸೂಚನೆ ಸಿಕ್ಕ ಬೆನ್ನಲ್ಲೇ ವಿಮಾನ ದೆಹಲಿಗೆ ವಾಪಸ್‌ ಆಗಿದೆ.  

ಇತ್ತೀಚಿನ ದಿನಗಳಲ್ಲಿ ಏರ್ ಇಂಡಿಯಾ ವಿಮಾನಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಘಟನೆಯ ಬಗ್ಗೆ ವಾಯು ಸುರಕ್ಷತಾ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದೆ.

ಬೆಳಗ್ಗೆ 6:15 ರ ಸುಮಾರಿಗೆ ವಿಮಾನವು ತುರ್ತು ಭೂಸ್ಪರ್ಶ ಮಾಡಿತು. 90ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎ3–20 ನಿಯೋ ವಿಮಾನದ ಒಂದು ಎಂಜಿನ್ ಸ್ಥಗಿತಗೊಂಡಿದ್ದು, ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. 

‌ಈ ವಿಮಾನವು ದೆಹಲಿಯಲ್ಲಿ ಮತ್ತೆ ಇಳಿಯುವ ಮೊದಲು 30 ನಿಮಿಷಗಳಿಗಿಂತ ಹೆಚ್ಚು ಕಾಲ ಹಾರಾಟ ನಡೆಸಿತ್ತು. ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಅದು ಇಂದೋರ್‌ಗೆ ಪ್ರಯಾಣ ಬೆಳೆಸಲಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ನೈಸರ್ಗಿಕ ವಿಕೋಪಗಳು ದೇಶಕ್ಕೆ ಎದುರಾದ ಪರೀಕ್ಷೆ: 125ನೇ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ