ನವದೆಹಲಿ: 26 ವರ್ಷಗಳ ಹಿಂದೆ ವ್ಯಕ್ತಿಯ ಶ್ವಾಸಕೋಸದಲ್ಲಿ ಸಿಲುಕಿದ್ದ ಪ್ಲಾಸ್ಟಿಕ್ ಪೆನ್‌ನ ಕ್ಯಾಪ್ ಅನ್ನು ದೆಹಲಿಯ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.
7 ವರ್ಷದವನಾಗಿದ್ದಾಗ ವ್ಯಕ್ತಿ ಅಚನಾಕ್ ಪೆನ್‌ನ ಕ್ಯಾಪ್ ಅನ್ನು ನುಗ್ಗಿದ್ದಾನೆ. ಆ ಬಳಿಕ ವ್ಯಕ್ತಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಿಲ್ಲ. ಆದರೆ ಈಚೆಗೆ ವ್ಯಕ್ತಿಗೆ ರಕ್ತ ಮಿಶ್ರಿತ ಕಫ ಕಾಣಿಸಿಕೊಂಡಿದೆ.
ಎಕ್ಸರೇಯಲ್ಲಿ ವ್ಯಕ್ತಿಯ ಎದೆಗೂಡಿನಲ್ಲಿ ಪೆನ್ ಕ್ಯಾಪ್ ಇರುವುದು ಕಾಣಿಸಿಕೊಂಡಿದೆ. ಅಪಾಯಗಳನ್ನು ಪರಿಗಣಿಸಿ ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಾ.ಸಬ್ಯಸಾಚಿ ಬಾಲ್ ನೇತೃತ್ವದ ಎದೆಗೂಡಿನ ಶಸ್ತ್ರಚಿಕಿತ್ಸಾ ತಂಡವು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆ.
26 ವರ್ಷಗಳ ಹಿಂದೆ ಸಿಲುಕಿದ್ದ ಪ್ಲಾಸ್ಟಿಕ್ ಪೆನ್ ಕ್ಯಾಪ್ ಅನ್ನು ಪತ್ತೆಹಚ್ಚಿ, ಅದನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.