Webdunia - Bharat's app for daily news and videos

Install App

Viral Video: ಊಟ ಏನಾದರೂ ಮಿಕ್ಕಿದೆಯಾ ಎಂದು ಸೀದಾ ಅಡುಗೆ ಮನೆಯೊಳಗೇ ನುಗ್ಗಿದ ಆನೆ: ವಿಡಿಯೋ

Krishnaveni K
ಸೋಮವಾರ, 27 ಜನವರಿ 2025 (14:28 IST)
Photo Credit: X
ಬೆಂಗಳೂರು: ಊಟ ಏನಾದರೂ ಮಿಕ್ಕಿದೆಯಾ ಎಂದು ಆನೆಯೊಂದು ಸೀದಾ ಅಡುಗೆ ಮನೆಯೊಳಗೇ ನುಗ್ಗಿದರೆ ಹೇಗಿರುತ್ತದೆ? ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಆಹಾರ ಹುಡುಕಿಕೊಂಡು ಆನೆಗಳು ನಾಡಿಗೆ ದಾಳಿಯಿಡುವುದು ಇದೇ ಮೊದಲಲ್ಲ. ಹಲವು ಬಾರಿ ಇಂತಹದ್ದೇ ಘಟನೆಗಳು ನಡೆದಿದ್ದು ಇದೆ. ಅದೇ ರೀತಿ ಈಗ ಆಹಾರ ಹುಡುಕಿಕೊಂಡು ಬಂದ ಆನೆಯೊಂದರ ವಿಡಿಯೋ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾ ವರದಿ ಪ್ರಕಾರ ಇದು ತಮಿಳುನಾಡಿನಲ್ಲಿ ನಡೆದ ಘಟನೆ. ರಾತ್ರಿ ವೇಳೆ ಆನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿ ಸೀದಾ ಆಹಾರಕ್ಕಾಗಿ ತಡಕಾಡುತ್ತದೆ. ಅಡುಗೆ ಮನೆಯ ಬಾಗಿಲು ಮುರಿದು ಗಜರಾಜ ಸೀದಾ ತನ್ನ ಸೊಂಡಿಲನ್ನು ಒಳ ನುಗ್ಗಿಸುತ್ತಾನೆ.

ಒಳಗಿದ್ದ ಪಾತ್ರೆ, ಗ್ಯಾಸ್ ಸಿಲಿಂಡರ್ ಹೀಗೆ ಸಿಕ್ಕಿದ್ದನ್ನೆಲ್ಲಾ ಚೆಂಡಾಡುತ್ತಾನೆ. ಅವನ ದಾಳಿಗೆ ಅಡುಗೆ ಮನೆಯಲ್ಲಿರುವ ವಸ್ತುಗಳೆಲ್ಲಾ ದಿಕ್ಕಾಪಾಲಾಗುತ್ತದೆ. ಮನೆಯವರೂ ಭಯಗೊಂಡು ದೂರದಿಂದಲೇ ನಿಂತು ನೋಡುತ್ತಾರೆ. ಇಂತಹದ್ದೊಂದು ವಿಡಿಯೋ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments