Select Your Language

Notifications

webdunia
webdunia
webdunia
webdunia

'ಇಪಿಎಫ್'ಗೆ ಇ-ನಾಮಿನೇಷನ್ ಮಾಡಬಹುದು!

'ಇಪಿಎಫ್'ಗೆ ಇ-ನಾಮಿನೇಷನ್ ಮಾಡಬಹುದು!
ಹೊಸದಿಲ್ಲಿ , ಗುರುವಾರ, 30 ಡಿಸೆಂಬರ್ 2021 (17:07 IST)
ಹೊಸದಿಲ್ಲಿ: ನಿಮ್ಮ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ ಡಿಸೆಂಬರ್ 31ರೊಳಗೆ ಮುಗಿಸಲೇಬೇಕಾದ ಹಲವಾರು ಕೆಲಸಗಳಿವೆ.
ಈ ಪೈಕಿ ಇಪಿಎಫ್ ಇ- ನಾಮಿನೇಷನ್ ಕೂಡ ಒಂದಾಗಿದೆ.

ಕಾರ್ಯಗಳನ್ನು ಮಾಡಬೇಕಾಗಿದೆ. ಇತ್ತೀಚೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇ ನಾಮಿನೇಷನ್ಗೆ ಸಂಬಂಧಿಸಿದ ಮಹತ್ವದ ಸೂಚನೆಯನ್ನು ನೀಡಿದೆ.

ಹಾಗೆಯೇ ಪಿಎಫ್ ಖಾತೆ ಹೊಂದಿರುವವರು ತಮ್ಮ ಖಾತೆಗೆ 2021ರ ಡಿಸೆಂಬರ್ 31ರೊಳಗೆ ನಾಮಿನಿಯನ್ನು ಸೇರ್ಪಡೆ ಮಾಡಬೇಕೆಂದು ಗಡುವು ನೀಡಿತ್ತು. ಆದರೆ, ನೀವು ಈ ದಿನಾಂಕ ಕಳೆದ ಬಳಿಕವೂ ಇ- ನಾಮಿನಿ ಸೇರ್ಪಡ ಮಾಡಬಹುದು.

ಇಪಿಎಫ್ಒ ಪೋರ್ಟಲ್ ನಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಅನೇಕರು ದೂರಿದ್ದರು.ಈ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ಬಳಿಕವೂ ಇ-ನಾಮಿನೇಷನ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗುವುದುಎಂದು EPFO ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಆದ್ರೆ ನಾಮಿನಿ ಸೇರ್ಪಡೆಗೆ ನಿರ್ದಿಷ್ಟ ಕೊನೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.ಇಪಿಎಫ್ ಗೆ ಇ-ನಾಮಿನೇಷನ್ ಸೇರ್ಪಡೆ ಅವಧಿ ವಿಸ್ತರಿಸಿದ್ದರೂ ಪಿಎಫ್ ಖಾತೆದಾರರು ಆದಷ್ಟು ಬೇಗ ಈ ಕೆಲಸವನ್ನು ಮಾಡಿ ಮುಗಿಸುವಂತೆ EPFO ಟ್ವೀಟ್ ಮೂಲಕ ಮನವಿ ಮಾಡಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬಲವಂತದ ಬಂದ್ ಮಾಡಿದರೆ ಕಾನೂನು ಕ್ರಮ - ಖಡಕ್ ವಾರ್ನಿಂಗ್