Select Your Language

Notifications

webdunia
webdunia
webdunia
webdunia

ಶೂ ಕಳ್ಳತನ: ಡೆಲಿವರಿ ಬಾಯ್‌ ಮೇಲೆ ಕ್ರಮ ಬೇಡ ಎಂದ ಸೋನು ಸೂದ್‌ಗೆ ನೆಟ್ಟಿಗರ ಪ್ರಶ್ನೆ

Sonu Sood

Sampriya

ನವದೆಹಲಿ , ಶನಿವಾರ, 13 ಏಪ್ರಿಲ್ 2024 (16:56 IST)
photo Courtesy Instagram
ನವದೆಹಲಿ: ಸಮಾಜಮುಖಿ ಸೇವೆ ಮೂಲಕ ರಿಯಲ್ ಸ್ಟಾರ್ ಎಂದೇ ಕರೆಸಿಕೊಂಡಿರುವ ಬಹುಭಾಷಾ ನಟ ಸೋನು ಸೂದ್‌ ಅವರು ಶೂ ಕಳ್ಳತನ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಬೆಂಬಲ ಸೂಚಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಏಪ್ರಿಲ್ 9 ರಂದು ಗುರುಗ್ರಾಮ್‌ನ ಫ್ಲಾಟ್‌ನ ಹೊರಗೆ ಇರಿಸಲಾಗಿದ್ದ ಜೋಡಿ ಶೂಗಳನ್ನು ಕದ್ದ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡೆಲಿವರಿ ಮ್ಯಾನ್‌ಗೆ ನಟ ಸೋನು ಸೂದ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸೋನು ಸೂದ್ ಅವರು, ಫುಡ್ ಡೆಲಿವರಿ ಏಜೆಂಟ್‌ ಒಬ್ಬರು ಅಪಾರ್ಟ್​ಮೆಂಟ್​ನಲ್ಲಿ ಆಹಾರವನ್ನು ಕೊಟ್ಟು ಹಿಂತಿರುಗುವಾಗ ಶೂ ಕಳ್ಳತನ ಮಾಡಿದವನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬೇಡಿ ಎಂದು ಕಂಪನಿ ಮತ್ತು ಪೊಲೀಸರಿಗೆ ಮನವಿ ಮಾಡಿದ್ದಾರೆ. ಅವನಿಗೆ ಆ ಶೂಗಳ ಅವಶ್ಯಕತೆಯಿದೆ. ಅವನಿಗೆ ಶೂ ತೆಗೆದು ಕೊಡಿಸುವ ಮೂಲಕ ಮಾನವೀಯತೆ ಮೆರೆಯಿರಿ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಸೋನು ಫೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಕಳ್ಳತನ ಮಾಡಿದವನಿಗೆ ಬೆಂಬಲಿಸುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಇನ್ನೂ  ಕಳ್ಳತನಕ್ಕೆ ಬೆಂಬಲಿಸಿದ ಸೋನು ಸೂದ್ ನಡೆಯನ್ನು ಕೆಲವರು ಟ್ರೋಲ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಸಹೋದರರ ದೌರ್ಜನ್ಯ ಡಾ ಸಿಎನ್ ಮಂಜುನಾಥ್ ಕೊನೆಗಾಣಿಸುತ್ತಾರೆ: ಎಚ್ ಡಿ ದೇವೇಗೌಡ