Select Your Language

Notifications

webdunia
webdunia
webdunia
webdunia

ವೃದ್ಧ ದಂಪತಿಗೆ ಮತ್ತು ಬರಿಸಿ ಲಕ್ಷಾಂತರ ರೂಪಾಯಿ ದೋಚಿದ ಮನೆಕೆಲಸದವರು!

ವೃದ್ಧ ದಂಪತಿಗೆ ಮತ್ತು ಬರಿಸಿ ಲಕ್ಷಾಂತರ ರೂಪಾಯಿ ದೋಚಿದ ಮನೆಕೆಲಸದವರು!
ಗುರ್ಗಾಂವ್ , ಸೋಮವಾರ, 30 ಅಕ್ಟೋಬರ್ 2023 (11:08 IST)
ಗುರ್ಗಾಂವ್: ಮನೆ ಕೆಲಸಕ್ಕೆಂದು ಬಂದಿದ್ದ ನೌಕರರು ವೃದ್ಧ ದಂಪತಿಗೆ ಮತ್ತು ಬರಿಸುವ ಔಷಧ ನೀಡಿ 35 ಲಕ್ಷ ರೂ. ನಗದು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನ, ಕಾರು ದೋಚಿ ಪರಾರಿಯಾಗಿದ್ದಾರೆ.

ವೃದ್ಧ ದಂಪತಿಯನ್ನು ನೋಡಿಕೊಳ್ಳಲು ಕೆಲವು ದಿನಗಳ ಹಿಂದಷ್ಟೇ ಆರೋಪಿ ಮಹಿಳೆ ಮತ್ತು ಪುರುಷನನ್ನು ನೇಮಿಸಲಾಗಿತ್ತು. ಆದರೆ ಮನೆಯ ಆಗುಹೋಗುಗಳನ್ನು ತಿಳಿದ ನೇಪಾಳ ಮೂಲದ ನೌಕರರು ಮತ್ತಿಬ್ಬರ ಸಹಾಯದಿಂದ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆಗೆ ಪ್ರತ್ಯೇಕ ತಂಡ ರಚಿಸಿದ್ದು ಸದ್ಯದಲ್ಲೇ ಆರೋಪಿಗಳನ್ನು ಸೆರೆಹಿಡಿಯುವ ವಿಶ್ವಾಸವಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆ ನಿರಾಕರಿಸಿದ ಮಗಳನ್ನು ತಂದೆಯೇ ಕತ್ತರಿಸಿ ಹಾಕಿದ