Publish Date: Mon, 25 May 2020 (10:22 IST)
Updated Date: Mon, 25 May 2020 (10:24 IST)
ನವದೆಹಲಿ : ಇಂದಿನಿಂದ ಭಾರತದಲ್ಲಿ ದೇಶಿಯ ವಿಮಾನಯಾನ ಪುನಾರಂಭವಾಗಿದ್ದು, ಲಾಕ್ ಡೌನ್ ನಲ್ಲಿ ಸಿಲುಕಿಕೊಂಡವರಿಗೆ ತಮ್ಮೂರಿಗೆ ಹೋಗಲು ಸರ್ಕಾರ ಅನುಮತಿ ನೀಡಿದೆ.
ಹಾಗೇ ಆದರೆ ವಿಮಾನಗಳಲ್ಲಿ ತಮ್ಮ ಊರಿಗೆ ಬರುವವರಿಗೆ ಆರೋಗ್ಯ ಇಲಾಖೆ ಇಂದು ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಅದರಲ್ಲೂ ಕೊರೊನಾ ಸೋಂಕು ಹೆಚ್ಚಾಗಿರುವ ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್ ಮುಂತಾದ ಕೆಲವು ರಾಜ್ಯಗಳು ತಮ್ಮ ರಾಜ್ಯಕ್ಕೆ ಬರುವವರಿಗೆ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿದೆ.
ಆಂಧ್ರಪ್ರದೇಶದಲ್ಲಿ ನಾಳೆಯಿಂದ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಹಾಗೇ ಪಶ್ಚಿಮ ಬಂಗಾಳದಲ್ಲಿ ಮೇ.28ರಿಂದ ಹಾರಾಟ ಆರಂಭವಾಗಲಿದೆ ಎನ್ನಲಾಗಿದೆ.