ಬಿಹಾರದಲ್ಲಾಡಿದ ಮಾತು ತಮಿಳುನಾಡಿನಲ್ಲಿ ಹೇಳಲು ಮೋದಿಗೆ ಧೈರ್ಯವಿದೆಯೇ: ಸ್ಟಾಲಿನ್ ಸವಾಲು

Sampriya
ಮಂಗಳವಾರ, 4 ನವೆಂಬರ್ 2025 (10:35 IST)
Photo Credit X
ಧರ್ಮಪುರಿ: ಬಿಹಾರ ಚುನಾವಣಾ ರ್ಯಾಲಿಯಲ್ಲಿ ಟಿಎನ್‌ ವಿರುದ್ಧ ಮಾತನಾಡಿದ ರೀತಿ ತಮಿಳುನಾಡಿನಲ್ಲಿ ಮಾತನಾಡುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗಿದೆಯಾ ಎಂದು ಸಿಎಂ ಸ್ಟಾಲಿನ್ ಪ್ರಶ್ನೆ ಮಾಡಿದರು. 

 ಧರ್ಮಪುರಿ ಪೆನ್ನಾಗರಂ ರಸ್ತೆಯ ಖಾಸಗಿ ಸ್ಥಳದಲ್ಲಿ ನಡೆದ ಧರ್ಮಪುರಿ ಸಂಸದ ಎ ಮಣಿ ಅವರ ಪುತ್ರನ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು ಸ್ಟಾಲಿನ್ ಮಾತನಾಡಿದರು.

ತಮಿಳುನಾಡಿಗೆ ಬಂದು ಟಿಎನ್ ವಿರುದ್ಧದ ದ್ವೇಷದ ಭಾಷಣಗಳನ್ನು ಪುನರಾವರ್ತಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರು ಸವಾಲೆಸೆದರು.   

ಮೋದಿ ಅವರು ಬಿಹಾರದ ಚುನಾವಣಾ ರ್ಯಾಲಿಯಲ್ಲಿ ಮೋದಿ ಅವರು ಡಿಎಂಕೆ ಬಿಹಾರದ ಜನರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದರು.

"ಬಿಹಾರದಲ್ಲಿ ಚುನಾವಣಾ ಲಾಭಕ್ಕಾಗಿ" ತಮಿಳುನಾಡು ವಿರುದ್ಧ ಪ್ರಧಾನಿ ದ್ವೇಷ ವ್ಯಕ್ತಪಡಿಸಿದ್ದಾರೆ, ಇದು "ಮತ ರಾಜಕೀಯ" ಎಂದು ಸಿಎಂ ಹೇಳಿದರು.

“ಕೇಂದ್ರ ಸರ್ಕಾರವು ಏನೇ ಪ್ರಯತ್ನಗಳನ್ನು ಮಾಡಿದರೂ, ತಮಿಳುನಾಡಿನಲ್ಲಿ ಬಿಜೆಪಿಗೆ ಏನೂ ಮಾಡಲು ಸಾಧ್ಯವಿಲ್ಲ, ಅದು ಟಿಎನ್‌ನಲ್ಲಿ ಅಸ್ತಿತ್ವವನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದರು. 

ಬಿಜೆಪಿ ತನ್ನದೇ ಆದ ವೈಫಲ್ಯಗಳಿಂದ ಕೋಪಗೊಂಡಿದೆ, ಅದಕ್ಕಾಗಿಯೇ ಪ್ರಧಾನಿ ಮೋದಿ ಬಿಹಾರದಲ್ಲಿ ಟಿಎನ್ ವಿರುದ್ಧ ದ್ವೇಷ ಭಾಷಣಗಳನ್ನು ಪ್ರಚಾರ ಮಾಡುತ್ತಿದ್ದಾರೆ.

ಪ್ರಧಾನಿಯವರು ಮತ ರಾಜಕಾರಣಕ್ಕಾಗಿ ಈ ಕೃತ್ಯ ಎಸಗುತ್ತಿದ್ದಾರೆ. ಬಿಹಾರದಲ್ಲಿ ನೀಡಿದ ಹೇಳಿಕೆಯನ್ನೇ ಪ್ರಧಾನಿ ಇಲ್ಲಿ ತಮಿಳುನಾಡಿನಲ್ಲಿ ನೀಡಬಹುದೇ? ಅವರು ಅದೇ ಭಾಷಣ ಮಾಡುತ್ತಾರೆಯೇ? ಅವರಿಗೆ ಹಾಗೆ ಮಾಡುವ ಧೈರ್ಯವಿದೆಯೇ ಎಂದು ಸವಾಲೆಸೆದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರದಲ್ಲಾಡಿದ ಮಾತು ತಮಿಳುನಾಡಿನಲ್ಲಿ ಹೇಳಲು ಮೋದಿಗೆ ಧೈರ್ಯವಿದೆಯೇ: ಸ್ಟಾಲಿನ್ ಸವಾಲು

ದೆಹಲಿ ಝೂನಲ್ಲಿದ್ದ ಆಫ್ರಿಕನ್ ಆನೆ ವೈರಲ್ ಸೋಂಕಿನಿಂದ ಸಾವು, ಹೆಚ್ಚಿದ ಆತಂಕ

ಆರ್‌ಎಸ್‌ಎಸ್‌ ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರವಲ್ಲ: ಮತ್ತೇ ಕುಟುಕಿದ ಪ್ರಿಯಾಂಕ್ ಖರ್ಗೆ

ತೇಜಸ್ವಿ ಸಿಎಂ ಆಗಲು, ರಾಹುಲ್‌ ಪ್ರಧಾನಿಯಾಗಲು ಮತದಾರರಿಗೆ ವಿಶೇಷ ಮನವಿಯಿಟ್ಟ ಡಿಕೆ ಶಿವಕುಮಾರ್

ಚಿಕನ್ ಫ್ರೈಗಾಗಿ ಯುದ್ಧಭೂಮಿಯಂತಾದ ಮದುವೆ ಮಂಟಪ, ಅಂಥಾದೇನಾಯಿತು ಗೊತ್ತಾ

ಮುಂದಿನ ಸುದ್ದಿ
Show comments