Select Your Language

Notifications

webdunia
webdunia
webdunia
webdunia

Pehalgam: ಪಹಲ್ಗಾಮ್ ದಾಳಿಯಲ್ಲಿ ಗಾಯಗೊಂಡವರಿಗಾಗಿ ಹಗಲು ರಾತ್ರಿ ಚಿಕಿತ್ಸೆ ನೀಡಿದ ವೈದ್ಯ ಹೀರೋಗಳು ಇವರೇ ನೋಡಿ

Pehalgam doctors

Krishnaveni K

ಜಮ್ಮು ಕಾಶ್ಮೀರ , ಶುಕ್ರವಾರ, 25 ಏಪ್ರಿಲ್ 2025 (12:39 IST)
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದಾಗಿ ಗಾಯಗೊಂಡು ಅನೇಕರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಹೀರೋಗಳ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ 26 ಮಂದಿ ಸಾವನ್ನಪ್ಪಿದ್ದರು. ಆದರೆ ಹಲವರು ಗಾಯಗೊಂಡಿದ್ದಾರೆ. ತಪ್ಪಿಸಿಕೊಂಡು ಓಡುವ ಭರದಲ್ಲಿ ಪೆಟ್ಟು ಮಾಡಿಕೊಂಡವರು ಅನೇಕರಿದ್ದರು. ಇವರೆಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಗಾಯಾಗಳುಗಳಿಗೆ ಈ ವೈದ್ಯರ ತಂಡ ಹಗಲು ರಾತ್ರಿಯೆನ್ನದೇ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಕೆಲಸ ಮಾಡಿದೆ. ಇವರಲ್ಲಿ ಅನೇಕರು ಪುರುಷ ವೈದ್ಯರಾಗಿದ್ದರೆ ಮತ್ತೆ ಕೆಲವು ಮಹಿಳಾ ವೈದ್ಯರೂ ಸೇರಿದ್ದಾರೆ.

ಈ ಹೀರೋಗಳಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇವರೂ ಒಂದು ರೀತಿಯಲ್ಲಿ ಸೈನಿಕರೇ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Pehalgam terror attack: ಇಸ್ರೇಲ್ ಬಳಿಕ ಭಾರತಕ್ಕೆ ಬಂದಿಳಿದ ಅಮೆರಿಕಾದ ಯುದ್ಧ ವಿಮಾನ: ಏನಿದರ ಹಿಂದಿನ ಲೆಕ್ಕಾಚಾರ