Select Your Language

Notifications

webdunia
webdunia
webdunia
webdunia

ಮಹಿಳೆಯ ವೇಷಧರಿಸಿ ಪಾರ್ಲರ್ ಗೆ ನುಗ್ಗಿದ ವ್ಯಕ್ತಿ ಅಲ್ಲಿ ಮಾಡಿದ್ದೇನು ಗೊತ್ತಾ?

ಮಹಿಳೆಯ ವೇಷಧರಿಸಿ ಪಾರ್ಲರ್ ಗೆ ನುಗ್ಗಿದ ವ್ಯಕ್ತಿ ಅಲ್ಲಿ ಮಾಡಿದ್ದೇನು ಗೊತ್ತಾ?
ಭೋಪಾಲ್ , ಗುರುವಾರ, 17 ಡಿಸೆಂಬರ್ 2020 (06:39 IST)
ಭೋಪಾಲ್ : ಮಹಿಳೆಯ ವೇಷಧರಿಸಿ ವ್ಯಕ್ತಿಯೊಬ್ಬ ಬ್ಯೂಟಿ ಪಾರ್ಲರ್ ಗೆ ನುಗ್ಗಿ ಮಾಲೀಕ ಮಹಿಳೆಗೆ ಕಿರುಕುಳ ನೀಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ವರದಿಯಾಗಿದೆ.

ಮಧ್ಯಾಹ್ನದ ವೇಳೆ ಮಹಿಳೆ ಕುಳಿತಿದ್ದಾಗ ಮಹಿಳೆಯ ವೇಷ ಧರಿಸಿ ಬಂದ ಪಾರ್ಲರ್ ಗೆ ಬಂದ ವ್ಯಕ್ತಿ ಕೂದಲು ಕತ್ತರಿಸುವಂತೆ ಕೇಳಿದ್ದಾನೆ. ಆಗ ಮಹಿಳೆಗ ಅನುಮಾನಬಂದು ಹೊರಗೆ ಹೋಗುವಂತೆ ಹೇಳಿದ್ದಾಳೆ. ಆಗ ಆತ ಆಕೆಯ ಬಾಯಿ ಮುಚ್ಚಿ ಕತ್ತು ಹಿಸುಕಲು ಯತ್ನಿಸಿದ್ದಾನೆ. ತಕ್ಷಣ ಮಹಿಳೆ ಕೂಗಿಕೊಂಡ ಕಾರಣ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮುಕ ಹೆಡ್ ಮಾಸ್ಟರ್ ವಿದ್ಯಾರ್ಥಿನಿಯರ ಮೇಲೆ ಹೀಗಾ ಮಾಡೋದು!