Select Your Language

Notifications

webdunia
webdunia
webdunia
webdunia

17 ಪುರುಷರಿಂದ ಮಹಿಳೆ ಮೇಲೆ ಮಾನಭಂಗ ಪ್ರಕರಣ; ಹೊಸ ತಿರುವು ಪಡೆದುಕೊಂಡ ಕೇಸ್!

17 ಪುರುಷರಿಂದ ಮಹಿಳೆ  ಮೇಲೆ ಮಾನಭಂಗ ಪ್ರಕರಣ; ಹೊಸ ತಿರುವು ಪಡೆದುಕೊಂಡ ಕೇಸ್!
ಡುಮ್ಕಾ , ಶುಕ್ರವಾರ, 11 ಡಿಸೆಂಬರ್ 2020 (07:16 IST)
ಡುಮ್ಕಾ : ಜಾರ್ಖಂಡ್ ನ ಆದಿವಾಸಿ ಮಹಿಳೆಯೊಬ್ಬಳು ಪೊಲೀಸರನ್ನು ಸಂಪರ್ಕಿಸಿ 17 ಪುರುಷರಿಂದ ಅತ್ಯಾಚಾರಕ್ಕೊಳಗಾದ ಬಗ್ಗೆ ಆರೋಪಿಸಿ ದೂರು ನೀಡಿದ್ದು, ಮಹಿಳೆಯ ಹೇಳಿಕೆ ಅಸಮಂಜಸವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ತನ್ನ ಪತಿಯ ಜೊತೆ ಮಾರುಕಟ್ಟೆಯಿಂದ ಮರಳುತ್ತಿದ್ದಾಗ ಪತಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ತನ್ನ ಮೇಲೆ 17 ಪುರುಷರು ಸಾಮೂಹಿಕ ಮಾನಭಂಗ ಎಸಗಿದ್ದಾರೆ ಎಂದು ಮಹಿಳೆ ಹೇಳಿದ್ದಳು. ಆದರೆ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆ ಭತ್ತ ಕೊಯ್ಲಿಗೆ ಸಹಾಯ ಮಾಡಲು ಪತಿ ಮತ್ತು ಮಕ್ಕಳ ಜೊತೆ ತನ್ನ ಹೆತ್ತವರ ಮನೆಗೆ ಬಂದಿದ್ದಳು ಎಂಬುದಾಗಿ ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಮಹಿಳೆ ನಿರಂತರವಾಗಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದ ಕಾರಣ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎನ್ನಲಾಗಿದೆ. ಹಾಗೇ ಮಹಿಳೆಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತರ್ಜಾಲದಲ್ಲಿ ಫೋಟೊ ಪೋಸ್ಟ್ ಮಾಡಿ ಗಿರಾಕಿಗಳನ್ನು ಫ್ಲ್ಯಾಟ್ ಗೆ ಆಹ್ವಾನಿಸುತ್ತಿದ್ದವರಿಗೆ ಕೊನೆಗೆ ಆಗಿದ್ದೇನು?