ಚೆನ್ನೈ : ಹೇರ್ ಸ್ಟೈಲ್ ವಿಚಾರಕ್ಕೆ ತಾಯಿ ಮಗನಿಗೆ ಬೈದ ಹಿನ್ನಲೆಯಲ್ಲಿ ಮನನೊಂದ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ವಲಸರವಕ್ಕಂ ಪ್ರದೇಶದಲ್ಲಿ ನಡೆದಿದೆ.
ಶ್ರೀನಿವಾಸನ್(16) ಆತ್ಮಹತ್ಯೆ ಮಾಡಿಕೊಂಡ ಹುಡುಗ. ದ್ವಿತೀಯ ಪಿಯುಸಿ ಓದುತ್ತಿರುವ ಈತ ಹೊಸದಾದ ರೀತಿಯ ಹೇರ್ ಸ್ಟೈಲ್ ಮಾಡಕೊಳ್ಳಲು ಕೂದಲು ಬೆಳೆಸಿದ್ದನು. ಆದರೆ ತಾಯಿಗೆ ಅದು ಇಷ್ಟವಾಗದ ಕಾರಣ ಮಗನಿಗೆ ಬೈದಿದ್ದು ಅವರ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದ ಮಗ ತನ್ನ ರೂಮಿಗೆ ಹೋಗಿ ನೇಣು ಹಾಕಿಕೊಂಡು ಸಾವನಪ್ಪಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.