Select Your Language

Notifications

webdunia
webdunia
webdunia
webdunia

ರೇಪ್‌ನಿಂದ ಗರ್ಭಿಣಿ: ಅಪ್ರಾಪ್ತಳಿಗೆ ಪಂಚಾಯಿತಿ ಸಲಹೆ ಏನ್ ಗೊತ್ತಾ?

Rape
katra , ಸೋಮವಾರ, 27 ನವೆಂಬರ್ 2023 (08:55 IST)
15ವರ್ಷದ ಬಾಲಕಿಯ ಮೇಲೆ ಸ್ಥಳೀಯರಿಬ್ಬರು ಅತ್ಯಾಚಾರ ಎಸಗಿದ್ದು, ಇದರ ಪರಿಣಾಮ ಬಾಲಕಿ ಗರ್ಭ ಧರಿಸಿದ್ದಾಳೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಪಂಚಾಯಿತಿಗೆ ದೂರು ನೀಡಿ ಅತ್ಯಾಚಾರಿಗಳ ಬಳಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾಳೆ. ಆದರೆ ಪಂಚಾಯಿತಿಯ ಸದಸ್ಯರು ಮಗುವನ್ನು ಮಾರಾಟ ಮಾಡಿ ಬಂದ ಹಣದಿಂದ ಪರಿಹಾರ ನೀಡುವಂತೆ ಆರೋಪಿಗಳಿಗೆ ಆದೇಶಿಸಿದ್ದಾರೆ.
 
ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ 15 ವರ್ಷದ ಬಾಲಕಿ ಪರಿಹಾರ ಕೇಳಿದ್ದಕ್ಕೆ ಮಗುವನ್ನು ಮಾರಿ ಅದರಿಂದ ಬಂದ ಹಣವನ್ನು ಪರಿಹಾರವಾಗಿ ಪಡೆಯುವಂತೆ ಸ್ಥಳೀಯ ಪಂಚಾಯಿತಿ ಸೂಚಿಸಿರುವ ಘಟನೆ ಬಿಹಾರದ ಮುಜಫರ್ಪುರದ ಕತ್ರಾದಲ್ಲಿ ನಡೆದಿದೆ.
 
ಇದರಿಂದ ನೊಂದ ಬಾಲಕಿ  ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ವಿರಹ ತಾಳದೇ ಪತಿ ಏನ್ ಮಾಡಿದ ಗೊತ್ತಾ?