Select Your Language

Notifications

webdunia
webdunia
webdunia
webdunia

ಪುತ್ರಿಯ ಮೇಲೆ ಪತಿಯಿಂದಲೇ ನಿರಂತರ ಅತ್ಯಾಚಾರ: ಪತ್ನಿ ದೂರು

ಪುತ್ರಿಯ ಮೇಲೆ ಪತಿಯಿಂದಲೇ ನಿರಂತರ ಅತ್ಯಾಚಾರ: ಪತ್ನಿ ದೂರು
meghalaya , ಶುಕ್ರವಾರ, 24 ನವೆಂಬರ್ 2023 (14:40 IST)
ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಭಾನುವಾರ ರಾತ್ರಿ ಮೃತ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾಳೆ. ಆಕೆಯ ತಲೆ ಕಡಿದು ದೇಹವನ್ನು ಸುಡಲಾಗಿದೆ. ಶಂಕಿತ ಆರೋಪಿಯಾದ ಆಕೆಯ ತಂದೆಯನ್ನು ಪೋಲಿಸರು ಬಂಧಿಸಿದ್ದಾರೆ. 
 
ಹುಡುಗಿಯ ದೇಹ ನಗ್ನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿರಬಹುದು ಎಂದು ಪೋಲಿಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನ್ನ ಗಂಡನ ಮೇಲೆಯೇ ದೂರು ನೀಡಿರುವ ಮೃತ ಬಾಲಕಿಯ ತಾಯಿ, ಮಗಳನ್ನಾತ ಲೈಂಗಿಕವಾಗಿ ಶೋಷಿಸಿದ್ದಾನೆ ಎಂದು ಆರೋಪಿಸಿದ್ದಾಳೆ. 
 
ಮಗಳು ಕಾಣೆಯಾಗಿರುವ ಬಗ್ಗೆ ತಂದೆಯೇ ದೂರು ನೀಡಿದ್ದ. ಮಗಳನ್ನು ವೈದ್ಯರ ಬಳಿ ಚಿಕಿತ್ಸೆಗೆಂದು ವಿಲಿಯಂ ನಗರಕ್ಕೆ ಕೊಂಡೊಯ್ದಿದ್ದೆ. ನನಗೆ ಮಾರುಕಟ್ಟೆಯಲ್ಲಿ ಕೆಲಸವಿದ್ದುದರಿಂದ ಆಕೆಯನ್ನು ಆಟೋದಲ್ಲಿ ಮನೆಗೆ ಕಳುಹಿಸಿದ್ದೆ. ಕೆಲ ಸಮಯದ ನಂತರ ನಾನು ಮನೆಗೆ ಮರಳಿದಾಗ ಮಗಳು ಮನೆಗೆ ತಲುಪದ್ದಿದ್ದು ತಿಳಿದು ಬಂತು ಎಂದು ಆತ ಪೋಲಿಸರಿಗೆ ವಿವರಣೆ ನೀಡಿದ್ದ. 
 
ಆದರೆ ಒಂದು ದಿನದ ನಂತರ ಬಾಲಕಿಯ ತಾಯಿ ತನ್ನ ಪತಿಯ ವಿರುದ್ಧವೇ ಪೋಲಿಸರಲ್ಲಿ ದೂರು ದಾಖಲಿಸಿದಳು. 
 
ಹುಡುಗಿಯ ಮೃತ ದೇಹ ಪತ್ತೆಯಾದ ನಂತರ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ವಿರುದ್ಧದ ಕಾಯಿದೆಯಡಿಯಲ್ಲಿ ಮತ್ತೆ ದೂರು ದಾಖಲಾಯಿತು ಮತ್ತು ಪೋಲಿಸರು ಮೃತಳ ತಂದೆಯನ್ನು ಬಂಧಿಸಿದರು. 
 
ಗಾರೋ ಹಿಲ್ಸ್ ಪ್ರದೇಶದಲ್ಲಿ ನಗ್ನ ಮೃತ ದೇಹ ಪತ್ತೆಯಾಗಿದ್ದರಿಂದ ಆಕೆಯ ದೇಹದ ಸ್ಥಿತಿಯ ಅವಲೋಕನದಿಂದ ಆಕೆಯ ಮೇಲೆ ಅತ್ಯಾಚಾರವಾಗಿರುವುದನ್ನು ಪುಷ್ಠೀಕರಿಸುತ್ತವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಪೋಲಿಸರು ಮರಣೋತ್ತರ ಪರೀಕ್ಷೆಯ ವರದಿಯಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೂವರು ಆರೋಪಿಗಳಿಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ