Select Your Language

Notifications

webdunia
webdunia
webdunia
webdunia

ಮದುವೆಯಾದ ನಾಲ್ಕೇ ದಿನಕ್ಕೆ ಸೋದರಿಯರಿಬ್ಬರು ಮಾಡಿದ ಆ ಖತರ್ನಾಕ್ ಕೆಲಸ ಏನು ಗೊತ್ತಾ?

ಮದುವೆಯಾದ ನಾಲ್ಕೇ ದಿನಕ್ಕೆ ಸೋದರಿಯರಿಬ್ಬರು ಮಾಡಿದ ಆ ಖತರ್ನಾಕ್ ಕೆಲಸ ಏನು ಗೊತ್ತಾ?
ಜೈಪುರ , ಭಾನುವಾರ, 3 ಮಾರ್ಚ್ 2019 (07:23 IST)
ಜೈಪುರ : ಸೋದರಿಯರಿಬ್ಬರು ಮದುವೆಯಾದ ನಾಲ್ಕು ದಿನದಲ್ಲಿ ಪತಿಯಂದರಿಗೆ ಹಾಲಿನಲ್ಲಿ ನಶೆ ಪದಾರ್ಥ ಬೆರೆಸಿ ಮನೆಯಲ್ಲಿರುವ ನಗದು-ಆಭರಣಗಳನ್ನು ತೆಗೆದುಕೊಂಡು ಪರಾರಿಯಾದ ಘಟನೆ ಜೈಪುರದ ಹರಮಾಡ ಪೊಲೀಸ್ ಠಾಣಾ ವ್ಯಾಪ್ತಿಯ ಪೊಖರಿಯಾವಸ ಎಂಬಲ್ಲಿ ನಡೆದಿದೆ.


ರಾಮನಾರಾಯಣ್ ಮತ್ತು ರಾಜೇಶ್ ಪತ್ನಿಯರಿಂದ ಮೋಸಕ್ಕೊಳಗಾದ ಪತಿಯಂದಿರು. ಇವರು ದಲ್ಲಾಳಿಗಳನ್ನು ಸಂಪರ್ಕಿಸಿ ವಧು ದಕ್ಷಿಣೆ ಮತ್ತು ಕಮೀಷನ್ 11 ಲಕ್ಷ ರೂ.  ನೀಡಿ ಸೋದರಿಯರನ್ನು ಅದ್ಧೂರಿಯಾಗಿ ಮದುವೆಯಾಗಿದ್ದರು.  ಆದರೆ ಸೋದರಿಯರಿಬ್ಬರು ಮದುವೆಯಾದ ನಾಲ್ಕೇ ದಿನಕ್ಕೆ ಪತಿಯಂದಿರಿಗೆ ಮತ್ತು ಬರುವ ಔಷಧಿ ನೀಡಿ ಮನೆಯಲ್ಲಿಯ ನಗದು, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ದಲ್ಲಾಳಿ ಮತ್ತು ಯುವತಿಯರಿಬ್ಬರ ವಿರುದ್ಧ ಹರಮಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು  ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ವಿಷಯಕ್ಕೆ ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿ