Daily Horoscope

Select Your Language

Notifications

webdunia
webdunia
webdunia
webdunia

ಸರಳ ವಿವಾಹವಾಗಿ ಮಾದರಿಯಾದ IAS ಜೋಡಿ!

ಡಿಸಿ
ಮಹಿಳಾ ಜಿಲ್ಲಾಧಿಕಾರಿ ಹಾಗೂ ಭೂಸ್ವಾಧೀನ ಹಾಗೂ ಪುನರ್ವಸತಿ ಆಯುಕ್ತರಾಗಿರುವ ಅಧಿಕಾರಿ ಸರಳ ವಿವಾಹವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಐಎಎಸ್  ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಹುಬ್ಬಳ್ಳಿಯಲ್ಲಿ ಸರಳವಾಗಿ ವಿವಾಹವಾಗುವ ಮೂಲಕ‌ ಮಾದರಿಯಾಗಿದ್ದಾರೆ.

ಹುಬ್ಬಳ್ಳಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮದುವೆ ಆದ ಅವರು, ಬಳಿಕ‌ ಪರಸ್ಪರ ಹಾರ ಬದಲಾಯಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಕೆಲ ಕುಟುಂಬದ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಉಜ್ವಲ್ ಕುಮಾರ್ ಪ್ರಸ್ತುತ ಕೃಷ್ಣ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಹಾಗೂ ಪುನರ್ವಸತಿ ಆಯುಕ್ತರಾಗಿದ್ದಾರೆ.

ಕಲಬುರಗಿಯಲ್ಲಿ ಈ ಹಿಂದೆ ಜಿಪಂ ಸಿಇಓ ಆಗಿದ್ದರು ಹೆಫ್ಸಿಬಾ. ಅದೇ ಸಮಯದಲ್ಲಿ ಕಲಬುರಗಿ ಜಿಲ್ಲಾಧಿಕಾರಿಯಾಗಿ ಉಜ್ವಲ್ ಕುಮಾರ ಕಾರ್ಯನಿರ್ವಹಿಸಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಬಂಡಿಪುರ ಅರಣ್ಯದಲ್ಲಿ ಬೆಂಕಿ; ಹೆಲಿಕಾಪ್ಟರ್ ಬಳಕೆ ಬಗ್ಗೆ ಸಚಿವ ಹೇಳಿದ್ದೇನು?