Select Your Language

Notifications

webdunia
webdunia
webdunia
webdunia

ಮಗಳು ತನ್ನದಲ್ಲ ಎಂದು ತಂದೆ ಮಾಡಿದ್ದೇನು ಗೊತ್ತಾ?

webdunia
ಗೋರಖ್ ಪುರ , ಬುಧವಾರ, 3 ಮಾರ್ಚ್ 2021 (07:54 IST)
ಗೋರಖ್ ಪುರ : ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ 2 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂಡ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.

ಆರೋಪಿ ಮದ್ಯಪಾನ ಮಾಡುತ್ತಿದ್ದು ಪ್ರತಿದಿನ ಮನೆಗೆ ಬಂದು ಪತ್ನಿ ಹಾಗೂ ಮೂವರು ಮಕ್ಕಳಿಗೆ ಹೊಡೆಯುತ್ತಿದ್ದ, ಅದರಲ್ಲಿ ಕೊನೆಯ 2 ವರ್ಷದ ಮಗಳು ತನ್ನದಲ್ಲ ಎಂದು ಹೇಳುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಪತ್ನಿ ತನ್ನ ತವರು ಮನೆಗೆ ಹೋಗಿದ್ದಳು. ಆದರೆ ಪತ್ನಿಗೆ ಅನಾರೋಗ್ಯಕ್ಕೆ ಒಳಗಾದ ಕಾರಣ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಬಂದ ಆರೋಪಿ ಕೊನೆಯ ಮಗಳನ್ನು ತನ್ನದಲ್ಲವೆಂದು ಕೊಲೆ ಮಾಡಿದ್ದಾನೆ.

ಈ ಬಗ್ಗೆ ಮಾಹಿತಿ ತಿಳಿದ ಪತ್ನಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಮಾನ ವ್ಯಕ್ತಪಡಿಸುತ್ತಿದ್ದ ತಂದೆಯನ್ನು ತಾಯಿಯ ಜೊತೆ ಸೇರಿ ಕೊಲೆ ಮಾಡಿಸಿದ ಮಗ