ಗ್ಯಾಂಗ್ ರೇಪ್ ಗೆ ಒಳಗಾಗಿ ಗರ್ಭಿಣಿಯಾದ ಮಹಿಳೆ ಹುಟ್ಟಿದ ಮಗುವನ್ನು ಮಾಡಿದ್ದೇನು ಗೊತ್ತಾ?

ಸೋಮವಾರ, 11 ಫೆಬ್ರವರಿ 2019 (06:17 IST)
ರಾಂಚಿ : ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದ ಸಂತ್ರಸ್ತೆಯೊಬ್ಬಳು ಮಗು ಗರ್ಭದಲ್ಲಿರುವಾಗಲೇ  ಅದನ್ನು ಮಾರಾಟ ಮಾಡಿದ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ.

ಕಳೆದ ವರ್ಷ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯೊಬ್ಬಳು ಗರ್ಭಧರಿಸಿದ್ದಾಳೆ. ಆದರೆ ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಮಗುವನ್ನು ಮಾರಲು ನಿರ್ಧಾರ ಮಾಡಿದ್ದು, ಮಕ್ಕಳಿಲ್ಲದ ದಂಪತಿಗಳು ಮಗುವನ್ನು ಖರೀದಿಸಲು ಮುಂದಾಗಿದ್ದಾರೆ.

 

ಕಳೆದ ಡಿಸೆಂಬರ್ ನಲ್ಲಿ ಆಕೆಗೆ ಮಗುವಾಗಿದ್ದು, ಮಗುವನ್ನು ದಂಪತಿ ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇದೀಗ ಈ ಬಗ್ಗೆ ಮಾಹಿತಿ ಪಡೆದ ಮಕ್ಕಳ ಕಲ್ಯಾಣ ಸಮಿತಿ ಇಲಾಖೆಯ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದಿದ್ದು, ಪ್ರಸ್ತುತ ಮಗುವನ್ನು ತಾಯಿಗಾಗಲಿ ಅಥವಾ ಖರೀದಿ ಮಾಡಿದ ದಂಪತಿಗಾಗಲಿ ನೀಡುವುದಿಲ್ಲ. ಬದಲಿಗೆ ಅಧಿಕೃತವಾಗಿ ದತ್ತು ಸ್ವೀಕಾರ ಮಾಡಿದ ಬಳಿಕವಷ್ಟೇ ಮಗುವನ್ನು ವಶಕ್ಕೆ ನೀಡುವುದಾಗಿ ಹೇಳಿದ್ದಾರೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಟ್ಟಿ ಚಿನ್ನದ ಗಣಿಯಲ್ಲಿ ಆಗಿದ್ದೇನು ಗೊತ್ತಾ? ಶಾಕಿಂಗ್!