Select Your Language

Notifications

webdunia
webdunia
webdunia
webdunia

ಅತ್ಯಾಚಾರಿಗೆ ಶಿಕ್ಷೆ ನೀಡಬೇಕಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ್ದೇನು ಗೊತ್ತಾ?

ಅತ್ಯಾಚಾರಿಗೆ ಶಿಕ್ಷೆ ನೀಡಬೇಕಿದ್ದ ಮಹಿಳಾ  ಪೊಲೀಸ್ ಅಧಿಕಾರಿ ಮಾಡಿದ್ದೇನು ಗೊತ್ತಾ?
ಅಹಮದಾಬಾದ್ , ಸೋಮವಾರ, 6 ಜುಲೈ 2020 (07:54 IST)
ಅಹಮದಾಬಾದ್ : ಅತ್ಯಾಚಾರಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕಿದ್ದ ಪೊಲೀಸ್ ಅಧಿಕಾರಿಯೇ ಕೇಸ್ ದಾಖಲಿಸದಿರಲು ಅತ್ಯಾಚಾರಿ ಆರೋಪಿಯ ಬಳಿ ಲಂಚ ಕೇಳಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಪಶ್ಚಿಮ ಅಹಮದಾಬಾದ್ ನ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ವೇತಾ ಜಡೇಜಾ ಲಂಚ ಕೇಳಿದ ಅಧಿಕಾರಿ. ಇವರು 2019ರಲ್ಲಿ ನಡೆದ ಅತ್ಯಾಚಾರ ಕೇಸ್ ವೊಂದನ್ನು ವಿಚಾರಣೆ ನಡೆಸುತ್ತಿದ್ದರು. ಆ ವೇಳೆ ಆರೋಪಿಯ ವಿರುದ್ಧ ಪಿಎಎಸ್ ಎ ಕಾಯ್ದೆ ಅಡಿ ಪ್ರಕರಣ ದಾಖಲಿಸದೇ ಇರಲು ಆರೋಪಿಯ ಸಹೋದರನ ಬಳಿ 35 ಲಕ್ಷ ಹಣದ ಬೇಡಿಕೆ ಇಟ್ಟಿದ್ದಾಳೆ.

ಇವರು ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟ ಕಾರಣ ಆತ ಆರೋಪಿ ಪೊಲೀಸ್ ಅಧಿಕಾರಿಯ ವಿರುದ್ಧ ದೂರು ನೀಡಿದ್ದಾನೆ. ಈ ದೂರಿನ ಆಧಾರದ ಮೇಲೆ ಶ್ವೇತಾ ಜಡೇಜಾ ರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಶ್ರೀರಾಮುಲುಗೆ ಟಾಂಗ್ ನೀಡಿದ ಸಿದ್ದರಾಮಯ್ಯ