Select Your Language

Notifications

webdunia
webdunia
webdunia
webdunia

ಮುಗಿಯದ ಮುಂಬೈ ಕಾಟ : ಕೊರೊನಾ ಕೇಸ್ ಮತ್ತೆ ಹೆಚ್ಚಳ

ಮುಗಿಯದ ಮುಂಬೈ ಕಾಟ : ಕೊರೊನಾ ಕೇಸ್ ಮತ್ತೆ ಹೆಚ್ಚಳ
ಕಲಬುರಗಿ , ಶುಕ್ರವಾರ, 3 ಜುಲೈ 2020 (20:15 IST)
ಮುಂಬೈ ಹಾಗೂ ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಕಲಬುರಗಿಯಲ್ಲಿ ಹೊಸದಾಗಿ 72 ಕೊರೊನಾ ವೈರಸ್ ಕೇಸ್ ಗಳು ದೃಢಪಟ್ಟಿವೆ.

ಮಹಾರಾಷ್ಟ್ರ ಪ್ರವಾಸ ಮುಗಿಸಿ ಜಿಲ್ಲೆಗೆ ಬಂದಿರುವ ಜನರಲ್ಲಿ ಕೋವಿಡ್ -19 ದೃಢಪಟ್ಟಿದೆ. ಅಷ್ಟೇ ಅಲ್ಲ, ಸೋಂಕಿತರ ಸಂಪರ್ಕದಲ್ಲಿದ್ದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಂಕು ಹರಡಿದ ಮೂಲಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಇದರೊಂದಿಗೆ ಕಲಬುರಗಿಯಲ್ಲಿ ಇದುವರೆಗೂ 1560 ಕೊರೊನಾ ಪಾಸಿಟಿವ್ ಕೇಸ್ ಗಳು ಕಂಡುಬಂದಂತೆ ಆಗಿವೆ.

1143 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಡೆಡ್ಲಿ ಕೊರೊನಾಕ್ಕೆ 22 ಜನರು ಸಾವನ್ನಪ್ಪಿದ್ದಾರೆ. 395 ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ, ಆಗಸ್ಟ್ ನಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತೆ ಎಂದ ಡಿಸಿ