Select Your Language

Notifications

webdunia
webdunia
webdunia
webdunia

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಶೇಷ ಸಾಧನೆ; ಸ್ಯಾಟಲೈಟ್ ಅನ್ನು ಹೊಡೆದುರುಳಿಸಿದ ಭಾರತ

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಶೇಷ ಸಾಧನೆ; ಸ್ಯಾಟಲೈಟ್ ಅನ್ನು ಹೊಡೆದುರುಳಿಸಿದ ಭಾರತ
ನವದೆಹಲಿ , ಬುಧವಾರ, 27 ಮಾರ್ಚ್ 2019 (13:00 IST)
ನವದೆಹಲಿ : 12 ಗಂಟೆಗೆ ಮಹತ್ವದ ಸಂದೇಶವೊಂದನ್ನು ನೀಡುವುದಾಗಿ ಟ್ವೀಟ್ ಮಾಡಿ, ಆ ಮೂಲಕ ದೇಶದ ಜನರಲ್ಲಿ ಕುತೂಹಲ ಮೂಡಿಸಿದ ಪ್ರಧಾನಿ ಮೋದಿ ಅವರು 12-24 ಗಂಟೆಗೆ ಶುರು ಮಾಡಿದ ಭಾಷಣದಲ್ಲಿ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.


ಅಮೆರಿಕಾ, ರಷ್ಯಾ ಹಾಗೂ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದು, ಇದೀಗ ಈ ಮಹತ್ತರ ಸಾಧನೆಯನ್ನು ಯಶಸ್ವಿಯಾಗಿ ಮಾಡುವುದರ ಮೂಲಕ  ಭಾರತ  ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂಬ ಹೆಮ್ಮೆಯ ಸಂಗತಿಯನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ.


ಮಿಶನ್ ಶಕ್ತಿ ಎಂಬ ಈ ಆಪರೇಶನ್ ಅತ್ಯಂತ ಕಠಿಣವಾಗಿತ್ತು. ಆದರೆ ಭಾರತದ ವಿಜ್ಞಾನಿಗಳು ಇದನ್ನು ಯಶಸ್ವಿಗೊಳಿಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ಈ ಮಹತ್ತರ ಸಾಧನೆಯಿಂದ ಸ್ಯಾಟಲೈಟ್ ಹೊಡೆದುರುಳಿಸುವ ತಂತ್ರಜ್ಞಾನವನ್ನು ಭಾರತ ಹೊಂದಿದಂತಾಗಿದೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗೆ 11.45 ರಿಂದ ಮಧ್ಯಾಹ್ನ 12ರೊಳಗೆ ಮಹತ್ವದ ಸಂದೇಶ ನೀಡುವುದಾಗಿ ಪ್ರಧಾನಿ ಮೋದಿ ಟ್ವೀಟ್