Select Your Language

Notifications

webdunia
webdunia
webdunia
webdunia

ದಾವೂದ್‌ ಬಲಗೈ ಬಂಟನಾಗಿದ್ದ ಛೋಟಾ ರಾಜನ್ ಶತ್ರುವಾಗಿದ್ದು ಹೇಗೆ ಗೊತ್ತಾ?

ದಾವೂದ್‌ ಬಲಗೈ ಬಂಟನಾಗಿದ್ದ ಛೋಟಾ ರಾಜನ್ ಶತ್ರುವಾಗಿದ್ದು ಹೇಗೆ ಗೊತ್ತಾ?
karachi , ಗುರುವಾರ, 21 ಡಿಸೆಂಬರ್ 2023 (11:58 IST)
ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಸಹಚರ  ಶಕೀಲ್  ಸುದ್ದಿಚಾನೆಲ್‍ವೊಂದನ್ನು ಸಂಪರ್ಕಿಸಿ, ರಾಜನ್  1993ರ ಮುಂಬೈ ಸರಣಿ ಸ್ಫೋಟದ ಆರೋಪಿಗಳ ಪೈಕಿ 6 ಜನರನ್ನು 1998-2001ರ ನಡುವೆ ಗುಂಡಿಕ್ಕಿ ಕೊಂದಿದ್ದಾನೆ. ರಾಜನ್ ಕೃತ್ಯವನ್ನು ಇದುವರೆಗೆ ತನಗೆ ಮರೆಯಲಾಗಿಲ್ಲ. ಇದಕ್ಕಾಗಿ ಅವನು ಜೀವವನ್ನು ಶೀಘ್ರದಲ್ಲೇ ತೆರಬೇಕಾಗಿದೆ ಎಂದು ಹೇಳಿದ. ಛೋಟಾ ರಾಜನ್ ಶತ್ರುವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
 
ಭೂಗತ ಲೋಕದ ಪಾತಕಿ ಮತ್ತು ದಾವೂದ್ ಇಬ್ರಾಹಿಂ ಮುಖ್ಯ ಬಂಟ ಚೋಟಾ ಶಕೀಲ್ ಒಂದು ಕಾಲದ ಸಹಚರನಾಗಿದ್ದ ಚೋಟಾ ರಾಜನ್ ಜತೆ ಡಿ ಕಂಪನಿಯ ವೈರತ್ವ ರಕ್ತಪಾತಕ್ಕೆ ತಿರುಗಿದ್ದು ಹೇಗೆ ಮತ್ತು 25 ವರ್ಷಗಳ ನಂತರವೂ ಮುಂದುವರಿದಿದ್ದು ಹೇಗೆಂದು ವಿವರ ನೀಡಿದ್ದಾನೆ. 
 
ಬಾಲಿಯಲ್ಲಿ ರಾಜನ್‌ನನ್ನು ಬಂಧಿಸಿ ಭಾರತಕ್ಕೆ ತಂದ ಕೆಲವು ದಿನಗಳಲ್ಲೇ ಶಕೀಲ್ ರಾಜನ್ ಜತೆ ತನ್ನ  2 ದಶಕಗಳ ವೈರತ್ವದ ಉಗಮವನ್ನು ಬಿಚ್ಚಿಟ್ಟನು. ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜನ್ ಬಂಟರಿಂದ ಹತರಾದ 6 ಮಂದಿ ವಾಸ್ತವವಾಗಿ ಅಮಾಯಕರು ಎಂದು ಶಕೀಲ್ ಅಭಿಪ್ರಾಯಪಟ್ಟ.  
 
ಹತರಾದವರಲ್ಲಿ ಯಾಕೂಬ್ ಯೆದಾ ಸೋದರ ಮಜೀದ್‌‌ಖಾನ್ ಡಾನ್‌ಗೆ ನಿಕಟವರ್ತಿಯಾಗಿದ್ದ. ರಾಜನ್ ತನ್ನ ಶೂಟರ್‌ಗಳನ್ನು ಬಳಸಿಕೊಂಡು ದೋಂಗ್ರಿ ಮತ್ತಿತರ ಪ್ರದೇಶಗಳಲ್ಲಿ ಅವರನ್ನು ನಿವಾರಿಸಿದ. ಈ ಹತ್ಯೆಗಳಿಂದ ಡಿ ಕಂಪೆನಿ ಕೋರ್ಟ್‌ನಲ್ಲಿ ರಾಜನ್‌ಗೆ ಮರಣದಂಡನೆ ವಿಧಿಸಲಾಗಿದ್ದು, ಶೀಘ್ರದಲ್ಲೇ ನೇಣುಗಂಭಕ್ಕೆ ಏರುತ್ತಾನೆ ಎಂದು ಶಕೀಲ್ ಪ್ರತಿಕ್ರಿಯಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರೆಸ್ಟುರಾಂಟ್‌ನಲ್ಲಿ ವೇಶ್ಯಾವಾಟಿಕೆ: ಹಲವು ಯುವತಿಯರ ಬಂಧನ