Select Your Language

Notifications

webdunia
webdunia
webdunia
webdunia

ಮದುವೆಯಾಗಿ 11 ವರ್ಷವಾದರೂ ಫಸ್ಟ್ ನೈಟ್ ಭಾಗ್ಯ ಕೂಡಿ ಬಂದಿಲ್ಲ! ಮುಂದೇನಾಯ್ತು?

ಮದುವೆಯಾಗಿ 11 ವರ್ಷವಾದರೂ ಫಸ್ಟ್ ನೈಟ್ ಭಾಗ್ಯ ಕೂಡಿ ಬಂದಿಲ್ಲ! ಮುಂದೇನಾಯ್ತು?
ಛತ್ತೀಸ್ಗಢ , ಗುರುವಾರ, 6 ಜನವರಿ 2022 (09:52 IST)
ರಾಯ್ಪುರ : ಮದುವೆಯೆಂದರೆ ಎರಡು ಮನಸುಗಳನ್ನು, ಎರಡು ಕುಟುಂಬಗಳನ್ನು ಬೆಸೆಯುವ ನಂಟು. ಆದರೆ, ಛತ್ತೀಸ್ಗಢದ ದಂಪತಿಯ ಕತೆಯೇ ಬೇರೆ.

ಮದುವೆಯಾಗಿ 11 ವರ್ಷ ಕಳೆದರೂ ಅವರಿಬ್ಬರೂ ಒಟ್ಟಿಗೇ ಸಂಸಾರ ಮಾಡಲು ಒಳ್ಳೆಯ ಮುಹೂರ್ತವೇ ಸಿಕ್ಕಿಲ್ಲ. ಹೀಗಾಗಿ, ಇನ್ನು ಮುಂದೂ ಆ ‘ಮುಹೂರ್ತ’ ಕೂಡಿಬರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿದ ಗಂಡ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ.

ಈ ವಿಚಿತ್ರವಾದ ಸಮಸ್ಯೆಯನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೂ ಆಘಾತವಾಗಿದ್ದು, ಆ ಗಂಡನಿಗೆ ಮದುವೆಯಿಂದ ಹಾಗೂ ಹೆಂಡತಿಯಿಂದ ಮುಕ್ತಿ ಕೊಡಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲದೆ ಪ್ರಸ್ಥಕ್ಕೂ ಮುಹೂರ್ತ ನೋಡುವ ಪದ್ಧತಿ ಕೆಲವು ಕಡೆಯಿದೆ. 11 ವರ್ಷಗಳ ಹಿಂದೆ ಮದುವೆಯಾಗಿದ್ದ ಛತ್ತೀಸ್ಗಢದ ದಂಪತಿಗೆ ಮೊದಲ ರಾತ್ರಿಗೆ ಇದುವರೆಗೂ ಶುಭ ಮುಹೂರ್ತ ಸಿಗಲೇ ಇಲ್ಲ. ಹೀಗಾಗಿ, ಆ ಮಹಿಳೆಯ ಮನೆಯವರು ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಲೇ ಇಲ್ಲ. ಬರೋಬ್ಬರಿ 11 ವರ್ಷ ಹೆಂಡತಿಗಾಗಿ ಕಾದ ಗಂಡ ಕೊನೆಗೆ ಬೇಸತ್ತು ಇದೀಗ ಡೈವೋರ್ಸ್ ಪಡೆದಿದ್ದಾನೆ

ಈ ವಿಚಿತ್ರ ಪ್ರಕರಣದ ವಿಚಾರಣೆ ನಡೆಸಿದ ಛತ್ತೀಸ್ಗಢ ಹೈಕೋರ್ಟ್, ಶುಭ ಮುಹೂರ್ತವೆಂಬುದು ಕುಟುಂಬದಲ್ಲಿ ಸಂತೋಷವಾಗಿರಲು ಮುಖ್ಯವಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಹೆಂಡತಿ ತನ್ನ ಗಂಡನ ಜೊತೆ ಬಾಳಲು ಮತ್ತು ಗಂಡನ ಮನೆಗೆ ಹೋಗದಂತೆ ಈ ಶುಭ ಮುಹೂರ್ತ ಅಡ್ಡಿಯಾಗಿದೆ.

ಇದನ್ನೇ ಮುಂದಿಟ್ಟುಕೊಂಡು 11 ವರ್ಷಗಳ ದಾಂಪತ್ಯ ಜೀವನದಿಂದ ಗಂಡ-ಹೆಂಡತಿಯಿಬ್ಬರೂ ದೂರ ಉಳಿದಿದ್ದಾರೆ. ಹೀಗಾಗಿ, ಹಿಂದೂ ವಿವಾಹ ಕಾಯ್ದೆಯಡಿ ಈ ಮದುವೆಯನ್ನು ಅನುರ್ಜಿತಗೊಳಿಸಲಾಗಿದೆ ಎಂದು ಹೇಳಿದೆ.

ಪ್ರಕರಣ ಹಾಗೂ ಕಾರಣವೆಂದು ಪರಿಗಣಿಸಿದ ಹೈಕೋರ್ಟ್ ವಿಚ್ಛೇದನಕ್ಕೆ ಅಸ್ತು ಎಂದಿದೆ. ಹೆಂಡತಿ ತನ್ನ ಗಂಡನೊಂದಿಗೆ 11 ವರ್ಷದಿಂದ ದೂರವೇ ಇರುವುದರಿಂದ ಈ ಮದುವೆಯನ್ನು ಅಮಾನ್ಯಗೊಳಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಮುಂದೆಯೇ ಪತ್ನಿಯ ಕೊಂದ ಪತಿ