Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಗರ್ಲ್​ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!

webdunia
ಶನಿವಾರ, 1 ಜನವರಿ 2022 (20:08 IST)
ಯುವಕ ಮತ್ತು ಯುವತಿ ಬಹಳ ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಮನೆಯವರು ಅವರ ಪ್ರೀತಿಗೆ ಒಪ್ಪದ ಕಾರಣದಿಂದ ದೆಹಲಿಯ ಹೊರಗೆ ಹೋಗಿ ಗುಟ್ಟಾಗಿ ಮದುವೆಯಾಗಿದ್ದರು. ಇದು ಯುವತಿಯ ಮನೆಯವರನ್ನು ಕೆರಳಿಸಿತ್ತು.ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾದ ಎಂಬ ಒಂದೇ ಕಾರಣಕ್ಕೆ ಯುವಕನನ್ನು ಥಳಿಸಿ, ಆತನ ಗುಪ್ತಾಂಗವನ್ನು ಕಟ್ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಮದುವೆಯಾಗಿ, ಓಡಿಹೋದ ಯುವಕನನ್ನು ಅಪಹರಿಸಿದ ಯುವತಿಯ ಕುಟುಂಬಸ್ಥರು ಥಳಿಸಿ, ಆತನ ಗುಪ್ತಾಂಗವನ್ನು ಕತ್ತರಿಸಿದ್ದಾರೆ.
ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆ ಯತ್ನ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಹಲ್ಲೆಗೊಳಗಾದ 22 ವರ್ಷದ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು, ಆತನನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಆ ಯುವಕ ಮತ್ತು ಯುವತಿ ಬಹಳ ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಮನೆಯವರು ಅವರ ಪ್ರೀತಿಗೆ ಒಪ್ಪದ ಕಾರಣದಿಂದ ದೆಹಲಿಯ ಹೊರಗೆ ಹೋಗಿ ಗುಟ್ಟಾಗಿ ಮದುವೆಯಾಗಿದ್ದರು. ಇದು ಯುವತಿಯ ಮನೆಯವರನ್ನು ಕೆರಳಿಸಿತ್ತು. ಅವರಿಬ್ಬರೂ ಮದುವೆಯಾದ ನಂತರ  ದೆಹಲಿಗೆ ಮರಳಿದ್ದರು. ಅವರ ಕುಟುಂಬಗಳಿಂದ ಅಪಾಯವಿರುವುದರಿಂದ ರಕ್ಷಣೆ ಬೇಕೆಂದು ಪೊಲೀಸರನ್ನು ಕೋರಿದ್ದರು.
 
ದಂಪತಿಯ ರಕ್ಷಣೆಗಾಗಿ ರಾಜೌರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಗ್ಗೆ ಯುವತಿಯ ಕುಟುಂಬದ ಸದಸ್ಯರಿಗೆ ಗೊತ್ತಾಯಿತು. ಹೀಗಾಗಿ, ಅವರಿಬ್ಬರೂ ಪೊಲೀಸ್ ಠಾಣೆಯಿಂದ ಹೊರಬಂದ ತಕ್ಷಣ, ಹುಡುಗಿಯ ಕುಟುಂಬ ಸದಸ್ಯರು ಅವರನ್ನು ಅಪಹರಿಸಿ, ಅಮಾನುಷವಾಗಿ ಥಳಿಸಿ, ಆ ಯುವಕನ ಗುಪ್ತಾಂಗವನ್ನು ಕತ್ತರಿಸಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ತವರು ಮನೆಗೆ ಹೋಗುತ್ತೇನೆಂದು ಹಠ ಮಾಡಿದ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ!